ಬೆಳಗಾವಿಯಲ್ಲಿ ಧಾರಾಕಾರ ಮಳೆ: ಮನಗೆಳಿಗೆ ನುಗ್ಗಿದ ನೀರು; ಸಾರ್ವಜನಿಕರ ಪರದಾಟ…

ಬೆಳಗಾವಿ,ಜೂ,30,2019(www.justkannada.in):  ಬೆಳಗಾವಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು , ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.

ಬೆಳಗಾವಿ ಜಿಲ್ಲೆಯ ವಿವಿಧ ಕಡೆಗಳಲ್ಲಿ  ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಧಾರಾಕಾರ ಮಳೆಯಿಂದಾಗಿ  ಮನೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ಬೆಳಗಾವಿಯ ಶಾಹುನಗರ, ಎಸ.ಸಿ.ಮೋಟರ್, ಮಾರುತಿ ನಗರದ ಎರಡನೇ ಕ್ರಾಸ್ ಬಳಿ ಮನೆಗಳಿಗೆ ನೀರು ನುಗ್ಗಿದ್ದು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ

ರಾತ್ರಿಯಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ  ಜನರು ಮನೆಯಿಂದ ಹೊರಕ್ಕೆ ಕಾಲಿಡದಂತಾಗಿದೆ. ಇತ್ತ ಖಾನಾಪುರ ತಾಲ್ಲೂಕಿನಲ್ಲಿ ಭಾರಿ ಮಳೆಯಾಗಿದ್ದು . ಮಲಪ್ರಭಾ ನದಿ, ಕಣಕುಂಬಿ ಹಳ್ಳ ತುಂಬಿದ ಹರಿಯುತ್ತಿದೆ. ಮಳೆಯಿಂದಾಗಿ ನದಿ ಪಕ್ಕ ಇರುವ ದೇವಾಲಯಕ್ಕೆ ನೀರು ನುಗ್ಗಿದೆ. ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ.

Key words: Belgavi- Heavy rain- Water- rushed- home