Tuesday, September 1, 2026

BDA Apartments

Home Crime ಅಕ್ರಮವಾಗಿ ಮರಗಳನ್ನ ಸಾಗಿಸುತ್ತಿದ್ದ ಐವರು ಅಂದರ್…

ಅಕ್ರಮವಾಗಿ ಮರಗಳನ್ನ ಸಾಗಿಸುತ್ತಿದ್ದ ಐವರು ಅಂದರ್…

ಕೊಡಗು,ಜೂ,30,2019(www.justkannada.in): ಅಕ್ರಮವಾಗಿ ಮರಗಳನ್ನ ಸಾಗಿಸುತ್ತಿದ್ದ ಐವರು ಆರೋಪಿಗಳನ್ನ ಕೊಡಗು ಅಪರಾಧ ಪತ್ತೆದಳದ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

ಕೊಡಗು ಜಿಲ್ಲೆಯ ಬೆಟ್ಟಗೇರಿ ಗ್ರಾಮದ ತೋಟ ವೊಂದರಲ್ಲಿ ವಶಕ್ಕೆ ಐವರನ್ನ ವಶಕ್ಕೆ ಪಡೆಯಲಾಗಿದೆ. ಕೊಡಗು ಜಿಲ್ಲೆಯ ಕಕ್ಕಬೆ ಗ್ರಾಮದ ಅಶ್ರಫ್, ರಿಯಾಜ್, ಅಬ್ದುಲ್‌ ರಹಿಂ, ಮಂಗಳೂರು ಜಿಲ್ಲೆ ಪುತ್ತೂರಿನ ಆರಿಸ್ ,ರಿಯಾಜ್  ಬಂಧಿತ ಆರೋಪಿಗಳು.

ಬಂಧಿತರು ಸುಮಾರು 15 ಲಕ್ಷ ಬೆಲೆ ಬಾಳುವ ವಿವಿಧ ಜಾತಿಯ ಸುಮಾರು 22 ಮರಗಳನ್ನ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದರು. ಈ ವೇಳೆ ಪೊಲೀಸರು ದಾಳಿ ನಡೆಸಿ ಐವರನ್ನ ಬಂಧಿಸಿದ್ದಾರೆ. ಮರ ಸಾಗಾಣಿಕೆಗೆ ಬಳಸಿದ್ದ ಕೆಎ.46,  6956 ನಂಬರಿನ ಲಾರಿಯನ್ನ ವಶಕ್ಕೆ ಪಡೆಯಲಾಗಿದೆ. ಈ ಕುರಿತು  ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Arrest – five –accused- smuggled-trees-kodagu