Saturday, August 8, 2026

BDA Apartments

Home Front Page ಸಮ್ಮಿಶ್ರ ಸರ್ಕಾರದ ವಿರುದ್ದ ಅಸಮಾಧಾನ ಹೊರ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ…

ಸಮ್ಮಿಶ್ರ ಸರ್ಕಾರದ ವಿರುದ್ದ ಅಸಮಾಧಾನ ಹೊರ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ…

ವಿಜಯಪುರ,ಜೂ,30,2019(www.justkannada.in): ಘೋಷಣೆಯಾಗಿರುವ ಹೊಸ ತಾಲೂಕುಗಳ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ  ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.

ಹೊಸ ತಾಲೂಕು ಪಂಚಾಯಿತಿ ರಚನೆ, ಸಿಬ್ಬಂದಿ ನೇಮಕದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ವಿಜಯಪುರದ ಅಲಮಟ್ಟಿಯಲ್ಲಿ ಇಂದು ಮಾತನಾಡಿದ ಸಿದ್ದರಾಮಯ್ಯ  ನನ್ನ ಕ್ಷೇತ್ರದ ಗುಳೇದಗುಡ್ಡ ತಾಲೂಕು ಘೋಷಣೆಯಾಗಿದೆ. ಅಲ್ಲಿಗೆ ತಹಶೀಲ್ದಾರರನ್ನು ಮಾತ್ರ ನೇಮಕ ಮಾಡಲಾಗಿದೆ. ಇತರೆ ಸಿಬ್ಬಂದಿ, ಕಚೇರಿಯನ್ನು ಮಾಡಿಲ್ಲ ಎಂದು  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ಸರ್ಕಾರ ನಡೆಸುತ್ತಿದ್ದ ಸಮಯದಲ್ಲಿ ಮಾತನಾಡುತ್ತಿದ್ದೆ. ನಾನೀಗ ಕೇವಲ ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದೇನೆ. ಹಾಗಾಗಿ ಅಷ್ಟೊಂದು ಮಾತನಾಡಲು ಸಾಧ್ಯವಿಲ್ಲ. ಎಲ್ಲವನ್ನೂ ಅಧಿಕೃತವಾಗಿ ಹೇಳಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

Key words: Former CM Siddaramaiah –outrage -against – coalition government.