Friday, August 7, 2026

BDA Apartments

Home Front Page ಬಿಬಿಎಂಪಿ ಕಚೇರಿ ಬೆಂಕಿ ಪ್ರಕರಣ: ಮೂರು ಆಯಾಮಗಳಲ್ಲಿ ತನಿಖೆಗೆ ಸೂಚನೆ- ಡಿಸಿಎಂ ಡಿ.ಕೆ ಶಿವಕುಮಾರ್.

ಬಿಬಿಎಂಪಿ ಕಚೇರಿ ಬೆಂಕಿ ಪ್ರಕರಣ: ಮೂರು ಆಯಾಮಗಳಲ್ಲಿ ತನಿಖೆಗೆ ಸೂಚನೆ- ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ಆಗಸ್ಟ್,12,2023(www.justkannada.in):  ನಿನ್ನೆ ಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿ ಸಂಭವಿಸಿದ ಆಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೂರು ಆಯಾಮಗಳಲ್ಲಿ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಘಟನೆ ಕುರಿತು ಮೂರು ಆಯಾಮಗಳಲ್ಲಿ ತನಿಖೆಗೆ ಸೂಚನೆ ನೀಡಲಾಗಿದೆ.  ಆಂತರಿಕ ತನಿಖೆ ನಡೆಸುವಂತೆ ಬಿಬಿಎಂಪಿ ತಾಂತ್ರಿಕ ತಂಡಕ್ಕೆ  ಸೂಚಿಸಲಾಗಿದೆ. ಪೊಲೀಸ್ ಇಲಾಖೆಗೆ ಹಾಗೂ ಇಂದನ ಇಲಾಖೆ ಅಧಿಕಾರಿಗಳಿಗೂ  ತನಿಖೆಗೆ ಸೂಚನೆ ನೀಡಿದ್ದೇವೆ. ಮೂರು ಇಲಾಖೆಗಳಿಂದಲೂ ತನಿಖಾ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದರು.

ತನಖೆ ನಂತರ ಸತ್ಯ ಗೊತ್ತಾಗಲಿದೆ.  ಈ ಸಂಬಂಧ ಸದ್ಯ ಯಾರ ಮೇಲೂ ಆರೋಪ ಮಾಡೊದಿಕ್ಕೆ ಆಗಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Key words: BBMP office- fire –case-investigation –three- dimensions- DCM- DK Shivakumar.