Saturday, August 1, 2026

BDA Apartments

Home Front Page ‘ನೀವು ಕರ್ನಾಟಕದ ಸಿಎಂ, ಮಹಾರಾಷ್ಟ್ರದ ಸಿಎಂ ಅಲ್ಲ’- ಮಹದಾಯಿ ಪ್ರತಿಭಟನೆ ವೇಳೆ ಬಿಎಸ್ ವೈ ವಿರುದ್ದ...

‘ನೀವು ಕರ್ನಾಟಕದ ಸಿಎಂ, ಮಹಾರಾಷ್ಟ್ರದ ಸಿಎಂ ಅಲ್ಲ’- ಮಹದಾಯಿ ಪ್ರತಿಭಟನೆ ವೇಳೆ ಬಿಎಸ್ ವೈ ವಿರುದ್ದ ರೈತ ಮುಖಂಡರ ಆಕ್ರೋಶ…

ಬೆಂಗಳೂರು, ಅ.17,2019(www.justkannada.in):  ಚುನಾವಣಾ ಪ್ರಚಾರದ ವೇಳೆ ಮಹಾರಾಷ್ಟ್ರಕ್ಕೆ ನೀರು ಹರಿಸುವುದಾಗಿ ಭರವಸೆ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ಕಿಡಿಕಾರಿರುವ ರೈತ ಮುಖಂಡ ವಿರೇಶ್ ಸೊಬರದಮಠ, ನೀವು ಕರ್ನಾಟಕದ ಸಿಎಂ. ಮಹಾರಾಷ್ಟ್ರದ ಸಿಎಂ ಅಲ್ಲ ಎಂದು ಹರಿಹಾಯ್ದಿದ್ದಾರೆ.

ಮಹದಾಯಿ ಕಳಸಾ-ಬಂಡೂರಿ ಯೋಜನೆ ಜಾರಿ ವಿಳಂಬ ಖಂಡಿಸಿ ರೈತ ಮುಖಂಡ ವೀರೇಶ್ ಸೊಬರದಮಠ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.  ನಗರದಲ್ಲಿಂದು ರೈತ ಮುಖಂಡರು ರಾಜಭವನ ಚಲೋ ನಡೆಸಿ ರಾಜ್ಯಪಾಲರಿಗೆ  ಮನವಿ ಸಲ್ಲಿಸಿದರು. ಮಹದಾಯಿ ವಿವಾದ ಬಗೆಹರಿಸುವಂತೆ  ಆಗ್ರಹಿಸಿ  ಕೆಎಸ್ ಆರ್ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನಾಕಾರರು ಧರಣಿ ನಡಸಿದರು.

ಇನ್ನು ರಾಜ್ಯದ ತುಬಚಿ, ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರಕ್ಕೆ ನೀರು ಹರಿಸುವುದಾಗಿ ಹೇಳಿಕೆ ನೀಡಿರುವ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ವಾಗ್ದಾಳಿ ನಡೆಸಿದ ರೈತ ಮುಖಂಡ ವಿರೇಶ್ ಸೊರಬದಮಠ, ನೀವು ಕರ್ನಾಟಕದ ಸಿಎಂ ಆಗಿದ್ದೀರಿ. ಮಹಾರಾಷ್ಟ್ರದ ಸಿಎಂ ಅಲ್ಲ. ಮೊದಲು ಕೃಷ್ಣಾ ನದಿ ವಿವಾದವನ್ನ ಬಗೆಹರಿಸುವ ಪ್ರಯತ್ನ ಮಾಡಿ. ನಮಗೆ ನೀರು ಬಿಟ್ಟಿಲ್ಲ. ಇನ್ನು ಅವರಿಗೆ ಎಂತಹ ಭರವಸೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Key words: Bangalore- former-veeresh sorabadamath- outrage- against- cm bs yeddyurappa