ಮೈಸೂರು,ಆಗಸ್ಟ್,1,2026 (www.justkannada.in): ಕೇರಳ ವಯನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬನಿ ಜಲಾಶಯ ಬಹುತೇಕ ಭರ್ತಿ ಯಾವುದೇ ಕ್ಷಣದಲ್ಲಿ ಡ್ಯಾಮ್ ನಿಂದ ನದಿಗೆ ನೀರು ಬಿಡುವ ಸಾಧ್ಯತೆ ಇದೆ ಎಂದು ಕಾವೇರಿ ನೀರಾವರಿ ನಿಗಮ ತಿಳಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕಾವೇರಿ ನೀರಾವರಿ ನಿಗಮ ಕಬಿನಿ ಡ್ಯಾಂ ನಿಂದ 8 ರಿಂದ 10 ಸಾವಿರ ಕ್ಯೂಸೆಕ್ ನೀರನ್ನ ನದಿಗೆ ಬಿಡುವ ಸಾಧ್ಯತೆ ಇದೆ. ಪ್ರಸ್ತುತ ಜಲಾಶಯಕ್ಕೆ 15 ಸಾವಿರ ಕ್ಯೂಸೆಕ್ ಒಳಹರಿವು ಇದೆ ಎಂದು ತಿಳಿಸಿದೆ.
ಆದರೆ ನದಿಗೆ ಕಬಿನ ಜಲಾಶಯದಿಂದ ನೀರು ಬಿಡಲು ರೈತರು ವಿರೋಧ ವ್ಯಕ್ತಪಡಿಸಿದ್ದು ನದಿಗೆ ನೀರು ಬಿಡುವ ಬದಲು ನಾಲೆಗಳಿಗೆ ನೀರು ಹರಿಸಿ ಎಂದು ಆಗ್ರಹಿಸಿದ್ದಾರೆ.
Key words: Kabina reservoir, almost, full, Water, release, any moment






