Sunday, August 23, 2026

BDA Apartments

Home Cinema ನಿರೀಕ್ಷಿತ ‘ಬಬ್ರೂ’ ಚಿತ್ರದ ಟ್ರೈಲರ್ ಬಿಡುಗಡೆ..

ನಿರೀಕ್ಷಿತ ‘ಬಬ್ರೂ’ ಚಿತ್ರದ ಟ್ರೈಲರ್ ಬಿಡುಗಡೆ..

ಬೆಂಗಳೂರು,ಅ,21,2019(www.justkannada.in):, ಅಪರಿಚಿತರ ಪಯಣದ ಪ್ರೇಮಕಾವ್ಯದ ಮೂಲಕ ಕುತೂಹಲ ಹೆಚ್ಚಿಸಿರುವ ಹೊಸಬರ ನಿರೀಕ್ಷಿತ ‘ಬಬ್ರೂ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಕನ್ನಡ ಚಿತ್ರರಂಗದಲ್ಲಿ ಹೊಸಬರ ಪ್ರಯೋಗಾತ್ಮಕ ಚಿತ್ರಗಳು ಬರುತ್ತಿವೆ.  ಈ ರೀತಿಯ ಹೊಸ ಕಥೆಯನ್ನು ಹೇಳುವ ಚಿತ್ರವೊಂದು ಕನ್ನಡಿಗರ ಮುಂದೆ ಬರುತ್ತಿದೆ. ಪ್ರೇಮಕಥೆಯನ್ನು ಹೊಸ ರೀತಿಯಲ್ಲಿ ಹೇಳುತ್ತಾ ವಿಭಿನ್ನ ಹೆಸರಿನ ಚಿತ್ರ ‘ಬಬ್ರೂ ‘ಟ್ರೈಲರ್ ಸೋಮವಾರ, ಅ.21 ರಂದು ಬಿಡುಗಡೆಯಾಗಿದೆ. ಸುಮನ್ ನಗರ್ ಕರ್ ಮುಖ್ಯಭೂಮಿಕೆಯಲ್ಲಿರುವ ಚಿತ್ರವು ಸುಂದರ ಪ್ರೇಮ ಪಯಣದ ಮಹಾಕಾವ್ಯ ಎಂದು ಟ್ರೈಲರ್ ನಲ್ಲಿ ಹೇಳಿದ್ದು ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸಿದೆ.

ಟ್ರೈಲರ್ ನಲ್ಲಿ ಏನಿದೆ?

ಬಬ್ರೂ ತನ್ನ ಟ್ರೈಲರ್ ನಲ್ಲಿ ಪ್ರೀತಿಯ ಪಯಣದ ಕಥೆಯನ್ನು ಹೇಳುತ್ತದೆ. ವಿಭಿನ್ನ ದೃಷ್ಟಿಕೋನವನ್ನಿಟ್ಟುಕೊಂಡ ಇಬ್ಬರು ಅಪರಿಚಿತರ ಪಯಣದ ಒಂದು ಸುಂದರ ಮಹಾಕಾವ್ಯ ಎಂದು ಟ್ರೈಲರ್ ಬಿಂಬಿಸುತ್ತದೆ. ಸೊಮಾರಿ ಯುವಕನೊಬ್ಬ ಒಬ್ಬ ಸುಂದರ ಅಪರಿಚಿತ ಯುವತಿಯೊಡನೆ ಸುಂದರ ಪ್ರಕೃತಿಯ ನಡುವೆ ಪಯಣಿಸುತ್ತಾರೆ.

ಕಾರು ಸಾಗುವ ದೃಶ್ಯಗಳು, ನಂತರ ಪಯಣದಲ್ಲಿ ಬರುವ ತಿರುವುಗಳು, ಭಾವಾಭಿವ್ಯಕ್ತಿಯ ಸನ್ನಿವೇಶಗಳು ಮೊದಲಾದವುಗಳನ್ನು ತೋರಿಸುವ ಟ್ರೈಲರ್ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಅಮೆರಿಕದಲ್ಲಿನ ಉತ್ಸಾಹಿ ಕನ್ನಡಿಗರ ತಂಡವು ಚಿತ್ರವನ್ನು ತಯಾರಿಸಿದೆ. ತಂಡದಲ್ಲಿನ ಬಹುತೇಕರು ಯಶಸ್ವಿ ಸಾಫ್ಟ್ ವೇರ್ ವೃತ್ತಿಪರರಾಗಿದ್ದು ಕನ್ನಡ ಮತ್ತು ಇಲ್ಲಿನ ಚಿತ್ರಗಳ ಮೇಲಿನ ಪ್ರೀತಿಯಿಂದ ತಮಗೆ ಸಿಕ್ಕ ಬಿಡುವಿನ ಅಮೂಲ್ಯ ಸಮಯವನ್ನು ಮೀಸಲಿರಿಸಿದ್ದಾರೆ.

ಸುಮನ್ ಪ್ರೊಡೊಕ್ಷನ್ಸ್ ಮತ್ತು ಯುಗ ಕ್ರೀಯೇಷನ್ಸ್ ಅರ್ಪಿಸುವ ಈ ಚಿತ್ರವನ್ನು ಸುಜಯ್ ರಾಮಯ್ಯ ನಿರ್ದೇಶನ ಮಾಡಿದ್ದಾರೆ.  ಕಥೆ ಮತ್ತು ಚಿತ್ರಕಥೆಯ ಹೊಣೆಯನ್ನೂ ಸುಜಯ್ ಹೊತ್ತಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಚಿತ್ರಕ್ಕಿದೆ.

ಲೋಕೇಶ್ ಬಿ ಎಸ್ ಅಸೋಸಿಯೇಟ್ ನಿರ್ದೇಶಕ ಮತ್ತು ಲೈನ್ ನಿರ್ಮಾಪಕರಾಗಿದ್ದಾರೆ. ಗುರುದೇವ್ ನಾಗರಾಜ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ. ಸುಮುಖ ಮತ್ತು ಸುಜಯ್ ಫೋಟೊಗ್ರಫಿಯ ಹೊಣೆ ಹೊತ್ತಿದ್ದಾರೆ. ವರುಣ್ ಶಾಸ್ತ್ರಿ ಸಂಭಾಷಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಬ್ರೂ ಚಿತ್ರದ ತಾರಾಗಣದಲ್ಲಿ ಸುಮನ್ ನಗರ್ ಕರ್, ಮಹಿ ಹಿರೇಮಠ, ಸನ್ನಿ ಮೋಜಾ, ರೇ ಟೊಸ್ಟಾದೊ, ಪ್ರಕೃತಿ ಕಶ್ಯಪ್, ಗಾನಾ ಭಟ್, ಸಂದೀಪ್ ಬೆಳ್ಳಿಯಪ್ಪ ಮೊದಲಾದವರಿದ್ದಾರೆ. ಬಬ್ರೂ ಟ್ರೈಲರ್ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದ್ದು ಚಿತ್ರದ ಬಗ್ಗೆ ಅಭಿಮಾನಿಗಳು ಕಾತರಿಸಿದ್ದಾರೆ.

Key words: babru-movie-Trailer-release