ಸೇತುವೆ ಕುಸಿದು ನದಿ ದಾಟಲು ಶಾಲಾ ಮಕ್ಕಳ ಪರದಾಟ: ಗಮನ ಹರಿಸದ ಜನಪ್ರತಿನಿಧಿಗಳ ವಿರುದ್ದ ಗ್ರಾಮಸ್ಥರ ಆಕ್ರೋಶ…….

ಮೈಸೂರು,ಅ,21,2019(www.justkannada.in): ಜಿಲ್ಲೆಯ ಎಚ್. ಡಿ ಕೋಟೆ ತಾಲ್ಲೂಕಿನ ಅಂಕನಾಥಪುರ ಬಳಿ ಇರುವ ಸೇತುವೆ ಪ್ರವಾಹದಿಂದ ಕುಸಿದಿದ್ದು ಪರಿಣಾಮ ಶಾಲಾ ಮಕ್ಕಳು ದಿನನಿತ್ಯ ಸೇತುವೆ ದಾಟಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಮೂರು ತಿಂಗಳ ಹಿಂದೆ ಭಾರಿ ಮಳೆಯಿಂದ, ಪ್ರವಾಹದಿಂದಾಗಿ  ಅಂಕನಾಥಪುರ ಸೇತುವೆ ಕುಸಿದಿತ್ತು. ಸೇತುವೆ ಕೊಚ್ಚಿಹೊಗಿ ಮೂರು ತಿಂಗಳು ಕಳೆದರೂ ಸಹ ಜನಪತ್ರಿನಿಧಿಗಳು ಇತ್ತ ಕಡೆ ಗಮನ ಹರಿಸಿಲ್ಲ. ಕನಿಷ್ಠ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲು ಮುಂದೆ ಬಂದಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶ.

ಇನ್ನು ಸೇತುವೆ ಕುಸಿದಿರುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.  ಶಾಲಾ ಮಕ್ಕಳು ಪ್ರತಿ ದಿನ ಶಾಲೆಗೆ ಹೋಗುವಾಗ ಬರವಾಗ ನದಿ ದಾಟಲು ಹರಸಾಹಸ ಪಡುತ್ತಿರುವ ಸ್ಥಿತಿ ಕಂಡು ಬಂದಿದೆ. ಸೇತುವೆ ಕುಸಿದಾಗ ಜನಪ್ರತಿನಿಧಿಗಳು ಒಂದು ದಿನದ ಪಿಕ್ ನಿಕ್ ರೀತಿ ಬಂದು ಹೋಗಿದ್ದಾರೆ. ಇಲ್ಲಿನ ಶಾಸಕರು ಕಂಡರೂ ಕಾಣದಂತೆ ಇದ್ದು ಯಾರೇ ಬಂದ್ರು ಸಮಸ್ಯೆ ಮಾತ್ರ ಸಮಸ್ಯೆ ಹಾಗೆಯೇ ಉಳಿದಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

Key words: mysore- School- children-  cross – river-  bridge- collapsed