Thursday, August 13, 2026

BDA Apartments

Home Front Page ಕೋವಿಡ್ ಕಿಟ್ ಖರೀದಿಯಲ್ಲಿ ಅವ್ಯವಹಾರ ಆರೋಪ: ನಾಳೆಯೇ ಭ್ರಷ್ಟಾಚಾರದ ದಾಖಲೆ ಬಿಡುಗಡೆ- ಮಾಜಿ ಸಿಎಂ ಸಿದ್ಧರಾಮಯ್ಯ…

ಕೋವಿಡ್ ಕಿಟ್ ಖರೀದಿಯಲ್ಲಿ ಅವ್ಯವಹಾರ ಆರೋಪ: ನಾಳೆಯೇ ಭ್ರಷ್ಟಾಚಾರದ ದಾಖಲೆ ಬಿಡುಗಡೆ- ಮಾಜಿ ಸಿಎಂ ಸಿದ್ಧರಾಮಯ್ಯ…

ಬೆಂಗಳೂರು,ಜು,22,2020(www.justkannada.in):  ಕೋವಿಡ್ ಕಿಟ್ ಖರೀದಿಯಲ್ಲಿ ಆವ್ಯವಹಾರ ನಡೆದಿದ್ದು, ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ದಾಖಲೆಯನ್ನ ನಾಳೆಯೇ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.jk-logo-justkannada-logo

ಕೋವಿಡ್ ಕಿಟ್ ಖರೀದಿಯಲ್ಲಿ ಆವ್ಯವಹಾರ ಆರೋಪ ಸಂಬಂಧ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಕೋವಿಡ್ ಕಿಟ್ ಖರೀದಿಯ ವಿವಿರದ ಬಗ್ಗೆ ದಾಖಲೆ ನೀಡುವಂತೆ ಸರ್ಕಾರಕ್ಕೆ ಕೇಳಿದ್ದೆ. ಕಳೆದ ಜುಲೈ 10 ರಂದೇ ಸರ್ಕಾರಕ್ಕೆ ಪತ್ರ ಬರೆದಿದ್ದೆ. 24 ಗಂಟೆಗಳಲ್ಲೇ ದಾಖಲೆ ನೀಡುವುದಾಗಿ ಹೇಳಿದ್ದರು. ಆದರೆ ಪತ್ರ ಬರೆದು 12 ದಿನಗಳಾದರೂ ಸರ್ಕಾರ ದಾಖಲೆ ನೀಡಿಲ್ಲ ಎಂದು ಕಿಡಿಕಾರಿದರು.covid kit- purchase- Release- corruption- record -Former CM -Siddaramaiah.

ಅಲ್ಲದೆ ರಾಜ್ಯ ಮುಖ್ಯಕಾರ್ಯದರ್ಶಿಗೂ ಕರೆ ಮಾಡಿದ್ದೆ. ಆದರೆ ಈವರೆಗೆ ಸರ್ಕಾರ ಕೋವಿಡ್ ಕಿಟ್ ಖರೀದಿ ಕುರಿತ ದಾಖಲೆ ನೀಡಿಲ್ಲ. ಹೀಗಾಗಿ ನಾಳೆಯೇ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ದಾಖಲೆಯನ್ನ ಬಿಡುಗಡೆ ಮಾಡುತ್ತೇನೆ. ಸರ್ಕಾರದ ಭ್ರಷ್ಟಾಚಾರವನ್ನ ಬಿಚ್ಚಿಡುವೆ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.

Key words:  covid kit- purchase- Release- corruption- record -Former CM -Siddaramaiah.