Friday, November 6, 2026

Dasara Wishes

Happy Dasara
Home Crime MUDA SCANDAL ಬಿ-ರಿಪೋರ್ಟ್‌ : ಸಿಎಂ ಸಿದ್ದರಾಮಯ್ಯ ಭವಿಷ್ಯ ಕೆಲ ಗಂಟಗಳಲ್ಲಿ ನಿರ್ಧಾರ.

MUDA SCANDAL ಬಿ-ರಿಪೋರ್ಟ್‌ : ಸಿಎಂ ಸಿದ್ದರಾಮಯ್ಯ ಭವಿಷ್ಯ ಕೆಲ ಗಂಟಗಳಲ್ಲಿ ನಿರ್ಧಾರ.

The court will pronounce its order today on the ‘B’ report filed in the MUDA (Mysore Urban Development Authority) case against Chief Minister Siddaramaiah. The investigating agency has filed the B report citing lack of evidence, and the political circle is focused on what kind of order the court will give in this regard. The case has already caused a lot of debate in state politics, and it is curious whether the B report will be accepted or whether it will be directed for further investigation.

ಬೆಂಗಳೂರು, ಡಿ.೧೮,೨೦೨೫: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣದಲ್ಲಿ ಸಲ್ಲಿಸಿರುವ ‘ಬಿ’ ರಿಪೋರ್ಟ್ ಇಂದು ನ್ಯಾಯಾಲಯ ಆದೇಶ ಪ್ರಕಟಿಸಲಿದೆ.

ತನಿಖಾ ಸಂಸ್ಥೆ ಪುರಾವೆಗಳ ಕೊರತೆಯನ್ನು ಉಲ್ಲೇಖಿಸಿ ಬಿ ರಿಪೋರ್ಟ್ ಸಲ್ಲಿಸಿದ್ದು, ಈ ಕುರಿತು ನ್ಯಾಯಾಲಯ ಯಾವ ರೀತಿಯ ಆದೇಶ ನೀಡಲಿದೆ ಎಂಬುದರ ಮೇಲೆ ರಾಜಕೀಯ ವಲಯದ ಗಮನ ಕೇಂದ್ರೀಕೃತವಾಗಿದೆ. ಈ ಪ್ರಕರಣವು ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಬಿ ರಿಪೋರ್ಟ್ ಸ್ವೀಕಾರವಾಗುತ್ತದೆಯೇ ಅಥವಾ ಮುಂದಿನ ತನಿಖೆಗೆ ಸೂಚನೆ ಸಿಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

MUDA SCANDAL ಬಿ-ರಿಪೋರ್ಟ್‌ : ಸಿಎಂ ಸಿದ್ದರಾಮಯ್ಯ ಭವಿಷ್ಯ ಕೆಲ ಗಂಟಗಳಲ್ಲಿ ನಿರ್ಧಾರ jk02

ಮುಡಾ ಪ್ರಕರಣ ಸಂಬಂಧ ‌ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಮಾಡುವ ಆದೇಶದ ಮೇಲೆ ಎಲ್ಲರ ಕಣ್ಣು ಕೇಂದ್ರೀಕೃತವಾಗಿದೆ.  ಸಿಎಂ ಸಿದ್ದರಾಮಯ್ಯನವರ ವಿರುದ್ದದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಹಾಗಾಗಿ ಪೊಲೀಸರ ಬಿ ರಿಪೋರ್ಟ್‌ ಸಮಂಜಸವಾಗಿದೆ ಎಂದು ಕೋರ್ಟ್‌ ವರದಿ ಅಂಗೀಕರಿಸಿದರೆ, ಸಿದ್ದರಾಮಯ್ಯ ಅವರ ವಿರುದ್ಧದ ಎಲ್ಲಾ ಆರೋಪಗಳು ನೇಪಥ್ಯಕ್ಕೆ ಸರಿಯಲಿವೆ.

MUDA SCANDAL ಬಿ muda case

ಒಂದು ವೇಳೆ ಆರೋಪಗಳು ಮೇಲ್ನೋಟಕ್ಕೆ ನಿಜ ಎಂದು  ನ್ಯಾಯಾಲಯ ಭಾವಿಸಿ ವಿಚಾರಣೆಗೆ ಅವಕಾಶ ನೀಡಿದರೆ ರಾಜ್ಯ ರಾಜಕೀಯದಲ್ಲಿ ಸುಂಟರಗಾಳಿಯೇ ಬೀಸಲಿದೆ. ಸದ್ಯ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ಈ ತೀರ್ಪು ಕೋಲಾಹಲ ಸೃಷ್ಠಿಸಲಿದೆ.

ಈ ಎಲ್ಲಾ ಪ್ರಶ್ನೆಗೆ ಕೆಲವೇ ಗಂಟೆಗಳಲ್ಲಿ ಉತ್ತರ ದೊರೆಯಲಿದೆ.

key words: B-Report, Muda scam, CM Siddaramaiah’s, fate to be decided, Court

ರಿಪೋರ್ಟ್‌ jk02_new jk02 new

SUMMARY: 

B-Report on Muda scam: CM Siddaramaiah’s fate to be decided in a few hours.