Tuesday, September 22, 2026

BDA Apartments

ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮುಂದೆ ಹಲವು ಬೇಡಿಕೆಗಳನ್ನಿಟ್ಟ ಆಟೋ ಚಾಲಕರು B...
Home Front Page ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮುಂದೆ ಹಲವು ಬೇಡಿಕೆಗಳನ್ನಿಟ್ಟ ಆಟೋ ಚಾಲಕರು.

ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮುಂದೆ ಹಲವು ಬೇಡಿಕೆಗಳನ್ನಿಟ್ಟ ಆಟೋ ಚಾಲಕರು.

ಬೆಂಗಳೂರು,ಜುಲೈ,31,2023(www.justkannada.in): ಆಟೋ ಚಾಲಕರ ಜೊತೆ ಸಾರಿಗೆ ಸಚಿವ  ರಾಮಲಿಂಗಾರೆಡ್ಡಿ ನಡೆಸಿದ  ಸಭೆ ಅಂತ್ಯವಾಗಿದ್ದು  ಸಚಿವರ ಮುಂದೆ ಆಟೋಚಾಲಕರು ಹಲವು ಬೇಡಿಕೆಗಳನ್ನಿಟ್ಟಿದ್ದಾರೆ.

ಈ ಕುರಿತು ಸಭೆ ಬಳಿಕ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ,  ಓಲಾ, ಉಬರ್​ನಿಂದ ಸಮಸ್ಯೆಯಾಗುತ್ತಿದೆ ಅಂತಾ ಆಟೋ ಚಾಲಕರು ತಿಳಿಸಿದ್ದಾರೆ. ಆದರೆ ರ್ಯಾಪಿಡೋ ವಿಚಾರವಾಗಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ ಎಂದು  ತಿಳಿಸಿದರು.

ಹಾಗೆಯೇ  ವಿಮೆ ಮಾಡಿಸಬೇಕು. ಚಾಲಕರ ದಿನಾಚರಣೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಕಾನೂನುಬಾಹಿರ ಆ್ಯಪ್‌ಗಳನ್ನು ಬ್ಯಾನ್ ಮಾಡುವಂತೆ ಕೋರಿದ್ದಾರೆ, ಏರ್​ಪೋರ್ಟ್​ ಬಳಿ ಇಂದಿರಾ ಕ್ಯಾಂಟೀನ್ ಓಪನ್​ಗೆ ಬೇಡಿಕೆ ಇದೆ. ಜಾಗ ಕೊಟ್ಟರೆ ಕೂಡಲೇ ಇಂದಿರಾ ಕ್ಯಾಂಟೀನ್​ ಓಪನ್ ಮಾಡುತ್ತೇವೆ. ಖಾಸಗಿ ಬಸ್​ಗಳ ಚಾಲಕರು ಕೂಡ ಸಮಸ್ಯೆ ಹೇಳಿಕೊಂಡಿದ್ದಾರೆ. ವಾಹನಗಳ ಮೇಲೆ ಬ್ಲಾಕ್ ಲಿಸ್ಟ್ ತೆಗೆಯಲು ಅದಾಲತ್ ಮಾಡುತ್ತೇವೆ ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

Key words: Auto drivers – many -demands – Transport Minister -Ramalingareddy.