Wednesday, November 11, 2026

Dasara Wishes

Happy Dasara
Home Front Page ಐತಿಹಾಸಿಕ ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ

ಐತಿಹಾಸಿಕ ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ

ಐತಿಹಾಸಿಕ ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ

ಹಾಸನ, ನವೆಂಬರ್, 11,2026 (www.justkannada.in):  ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಶಕ್ತಿದೇವತೆ ಹಾಸನಾಂಬೆಯ ದರ್ಶನೋತ್ಸವಕ್ಕೆ ಇಂದು ತೆರೆ ಬಿದ್ದಿದ್ದು ದೇವಾಲಯದ ಗರ್ಭಗುಡಿಯ ಬಾಗಿಲು ಬಂದ್ ಮಾಡಲಾಗಿದೆ.

ದೇವಾಲಯದಲ್ಲಿ ಹಾಸನಾಂಬೆಗೆ ಪೂಜೆ ಸಲ್ಲಿಸಿ ನಂತರ  ಗರ್ಭಗುಡಿಯಲ್ಲಿ  ದೀಪ ಹಚ್ಚಿಟ್ಟು ದೇವಾಲಯದ ಮೇಲೆ ಹೂ ಹಾಕಿ ದೇಗುಲದ ಬಾಗಿಲು ಬಂದ್ ಮಾಡಲಾಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಶಿವಲಿಂಗೇಗೌಡರು ಉಪಸ್ಥಿತರಿದ್ದರು.ಐತಿಹಾಸಿಕ ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ

ಬಾಗಿಲು ತೆರೆದ ದಿನದಿಂದ ಈವರೆಗೆ 31 ಲಕ್ಷಕ್ಕೂ ಅಧಿಕ ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಟಿಕೆಟ್ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ₹25.36 ಕೋಟಿ ಆದಾಯ ಸಂಗ್ರಹವಾಗಿದೆ.

ಇಂದು ದೇವಾಲಯದಲ್ಲಿ ಅರ್ಚಕರು ದೇವಿಗೆ ನೈವೇದ್ಯ ಅರ್ಪಿಸಿ, ಅಲಂಕಾರ ವಿಸರ್ಜನೆ ಪೂಜೆ ನಡೆಸಿದ್ದು,  ಪೂಜೆಯ ಬಳಿಕ ದೇವಿಯ ವಿಶ್ವರೂಪ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ವಿಶ್ವರೂಪ ದರ್ಶನದ ನಂತರ ಸಿಬ್ಬಂದಿ ಗರ್ಭಗುಡಿಯ ಬಾಗಿಲನ್ನು ಮುಚ್ಚಿ ಸೀಲ್ ಮಾಡಿದರು.Curtain falls jk02_new jk02 new

Curtain falls, historic, Hasanamba Darshana Utsava

English Summary
Title

Curtain Falls on Historic 2026 Hasanamba Darshana Utsava in Hassan

Short Description
The curtain falls on the historic 2026 Hasanamba Darshana Utsava in Hassan, Karnataka, as the sacred sanctum doors ceremonially close today, November 11. Drawing a record-breaking turnout of over 28 lakh devotees during its annual Deepavali festival window, the 12th-century Hoysala-era Hasanamba Temple now seals its inner shrine until next year. Following centuries-old tradition, priests placed a lit ghee lamp (Nanda Deepa), fresh flowers, and cooked rice inside the garbhagriha before locking the doors—offerings believed to miraculously remain fresh and intact until the temple reopens during Deepavali 2027.
Keywords
Curtain falls, historic, Hasanamba Darshana Utsava