ಬೆಂಗಳೂರು,ನವೆಂಬರ್,11,2026 (www.justkannada.in): ರಾಜ್ಯದಲ್ಲಿ ಈಗಾಗಲೇ ನಂದಿನಿ ಮತ್ತು ಅಮೂಲ್ ಹಾಲಿನ ದರವನ್ನು 8 ರೂ. ಏರಿಕೆ ಮಾಡಲಾಗಿದ್ದು ಜೊತೆಗೆ ಮೊಸರಿನ ದರವೂ ದುಬಾರಿಯಾಗಿ ಏರಿಕೆಯಾಗಿದೆ. ಈ ಬೆನ್ನಲ್ಲೆ ಇದೀಗ ‘ಮದರ್ ಡೈರಿ’ ಸಂಸ್ಥೆಯೂ ಕೂಡ ತನ್ನ ಹಾಲಿನ ದರವನ್ನು ಹೆಚ್ಚಳ ಮಾಡಿದೆ.
ನಂದಿನಿ ಹಾಗೂ ಅಮೂಲ್ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರ ಪ್ರತಿ ಲೀಟರ್ ಗೆ 2 ರೂಪಾಯಿಯಿಂದ 4 ರೂಪಾಯಿಯವರೆಗೆ ಏರಿಕೆ ಮಾಡಲಾಗಿದೆ, ಈ ನೂತನ ದರಗಳು ನಾಳೆಯಿಂದಲೇ ಅನ್ವಯವಾಗಲಿವೆ.
ರಾಜ್ಯ ಸರ್ಕಾರ ನಂದಿನಿ ಹಾಲಿನ ದರವನ್ನ 8 ರೂಪಾಯಿ ಹೆಚ್ಚಿಗೆ ಮಾಡಿದ್ದು ಅದರಲ್ಲಿ 7 ರೂ ರೈತರಿಗೆ 1 ರೂ ಕೆಎಂಎಫ್ ಗೆ ನೀಡಲಾಗುತ್ತದೆ ಎಂದಿದೆ. ಹಾಲಿನ ಜೊತೆಗೆ ಮೊಸರಿನ ಬೆಲೆಯೂ ಭಾರೀ ಮಟ್ಟದಲ್ಲಿ ಏರಿಕೆಯಾಗಿದೆ. ಲೀಟರ್ ಮೊಸರಿನ ದರ 14 ರೂ. ಏರಿಕೆಯಾಗಿದೆ. ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
Mother Dairy, raises, milk prices.






