ಬೆಂಗಳೂರು,ನವೆಂಬರ್,11,2026 (www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದೀಪಾವಳಿ ಸಂಭ್ರಮ ಮುಗಿದ ಬೆನ್ನಲ್ಲೆ ನಗರದ ಪರಿಸರಕ್ಕೆ ಪಟಾಕಿ ಸಿಡಿತ ಕಂಟಕವಾಗಿ ಪರಿಣಮಿಸಿದೆ.
ಹೌದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳ ಅತಿಯಾದ ಬಳಕೆಯಿಂದ ಶೇ. 30ರಷ್ಟು ವಾಯುಮಾಲಿನ್ಯ ಹೆಚ್ಚಿದ್ದು, ಇದರಿಂದಾಗಿ ಬೆಂಗಳೂರಿನಲ್ಲಿ ವಿಷಗಾಳಿ ಆವರಿಸಿದೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಸತತವಾಗಿ ಪಟಾಕಿ ಸಿಡಿಸಿರುವುದರಿಂದ ವಾತಾವರಣದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ಕಲುಷಿತ ಗಾಳಿಯ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.
ನಗರದ ವಾಯುಮಾಲಿನ್ಯ ಮಟ್ಟದಲ್ಲಿ ಶೇಕಡಾ 30 ರಷ್ಟು ಏರಿಕೆ ಕಂಡುಬಂದಿದೆ. ಹಾಗೆಯೇ ಬೆಂಗಳೂರಿನ ಹಲವು ಪ್ರಮುಖ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಸಾಮಾನ್ಯ ದಿನಗಳಿಗಿಂತ ವಾಯು ಗುಣಮಟ್ಟ ಸೂಚ್ಯಾಂಕ (AQI) ಕಳಪೆ ಮಟ್ಟಕ್ಕೆ ತಲುಪಿದೆ. ಉಸಿರಾಟದ ವಾಯುಗುಣಮಟ್ಟ ಶೇ.179ಕ್ಕೆ ಕುಸಿದಿದ್ದು, ಮಕ್ಕಳು ವೃದ್ದರು ಉಸಿರಾಟ ತೊಂದರೆ ಇರುವರಿಗೆ ಸಂಕಟ ಉಂಟಾಗಿದೆ. ಪಟಾಕಿ ಸಿಡಿಸುವಿಕೆಯಿಂದಾಗಿ ಬೆಂಗಳೂರಿನ ವಾತಾವರಣ ಕಲುಷಿತಗೊಂಡಿರುವುದರಿಂದ ಸಾರ್ವಜನಿಕರು, ಮುಖ್ಯವಾಗಿ ಉಸಿರಾಟದ ತೊಂದರೆ ಇರುವವರು, ಹಿರಿಯ ನಾಗರಿಕರು ಮತ್ತು ಮಕ್ಕಳು ತೀವ್ರ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ತಜ್ಞರು ತಿಳಿಸಿದ್ದಾರೆ.
Deepavali, Firecracker, Bengaluru, Air Pollution, Rises, 30%






