Friday, August 7, 2026

BDA Apartments

Home Crime ರೌಡಿ ಚಟುವಟಿಕೆಗೆ ಬ್ರೇಕ್ ಹಾಕಲು ಕಾರಾಗೃಹದ ಮೇಲೆ ದಾಳಿ: ಮಾರಕಾಸ್ತ್ರಗಳು, ಗಾಂಜಾ ವಶ- ಜಂಟಿ ಪೊಲೀಸ್ಆಯುಕ್ತ...

ರೌಡಿ ಚಟುವಟಿಕೆಗೆ ಬ್ರೇಕ್ ಹಾಕಲು ಕಾರಾಗೃಹದ ಮೇಲೆ ದಾಳಿ: ಮಾರಕಾಸ್ತ್ರಗಳು, ಗಾಂಜಾ ವಶ- ಜಂಟಿ ಪೊಲೀಸ್ಆಯುಕ್ತ ಸಂದೀಪ್ ಪಾಟೀಲ್  ಮಾಹಿತಿ

ಬೆಂಗಳೂರು,ಅ,9,2019(www.justkannada.in): ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ,ರೌಡಿ ಚಟುವಟಿಕೆಗೆ ಬ್ರೇಕ್ ಹಾಕಲು ಆಯುಕ್ತರು ಸೂಚಿಸಿದ್ದಾರೆ. ಹೀಗಾಗಿ ಬೆಳಗ್ಗೆಯೇ ಕಾರಾಗೃಹದ ಮೇಲೆ ದಾಳಿ ಮಾಡಿದ್ದು, ಪ್ರತಿ ಬ್ಯಾರಕ್ ನಲ್ಲೂ ತಪಾಸಣೆ ಮಾಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಪರಪ್ಪರ ಅಗ್ರಹಾರದಲ್ಲಿ ಸಿಸಿಬಿ ದಾಳಿ ಮುಕ್ತಾಯವಾದ ಬಳಿಕ ಮಾತನಾಡಿದ ಸಂದೀಪ್ ಪಾಟೀಲ್, ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ,ರೌಡಿ ಚಟುವಟಿಕೆಗೆ ಬ್ರೇಕ್ ಹಾಕಲು ಆಯುಕ್ತರು ಸೂಚಿಸಿದ್ದಾರೆ. ಹೀಗಾಗಿ ಬೆಳಗ್ಗೆಯೇ ಕಾರಾಗೃಹದ ಮೇಲೆ ದಾಳಿ ಮಾಡಿದ್ದು, ಪ್ರತಿ ಬ್ಯಾರಕ್ ನಲ್ಲೂ ತಪಾಸಣೆ ಮಾಡಲಾಗಿದೆ. ದಾಳಿ ವೇಳೆ 37 ಚಾಕು ಮತ್ತು ಡ್ಯಾಗರ್ ಗಳು ಸಿಕ್ಕಿವೆ. ಗಾಂಜಾ ಮತ್ತು ಗಾಂಜಾ ಸೇವನೆ ಮಾಡುವ ಪೈಪ್ ಗಳು ಜಪ್ತಿ ಮಾಡಲಾಗಿದೆ. ಮೊಬೈಲ್ ಮತ್ತು ಸಿಮ್ ಕಾರ್ಡ್ ಗಳು ಸಿಕ್ಕಿದ್ದು, ಅದರ ಬಗ್ಗೆ ತನಿಖೆ ನಡೆಸಲಾಗ್ತಿದೆ‌ ಎಂದು ತಿಳಿಸಿದರು.

ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿ ಒಳಗಿದ್ದು, ಅವರು ಅಲ್ಲಿಂದಲೇ ಅಪರಾಧ ಚಟುವಟಿಕೆ ಮಾಡಲಾಗುತ್ತಿರುವ ಬಗ್ಗೆ ಮಾಹಿತಿ ಹಿನ್ನಲೆ ದಾಳಿ  ನಡೆಸಿದ್ದವು. ತನಿಖೆಯ ದೃಷ್ಟಿಯಿಂದ ಕೆಲ ವಿಷಯಗಳನ್ನ ಗೌಪ್ಯವಾಗಿಡಬೇಕಾಗುತ್ತೆ‌‌. ಜೈಲು ಸೂಪರ್ಡೆಂಟ್ ಪರಿಶೀಲನೆ ವೇಳೆ ಜೊತೆಗಿದ್ರು, ಈ ಬಗ್ಗೆ ಹೆಚ್ಚಿನ ವಿಚಾರಣೆ  ನಡೆಸಲಾಗುತ್ತೆ ಎಂದು ಸಂದೀಪ್ ಪಾಟೀಲ್ ತಿಳಿಸಿದರು.

Key words: Attack – parappana agrahara-   Joint Police – Commissioner -Sandeep Patil