‘ಯುವರತ್ನ’ ಅಪ್ಪು ಹಾಡಿನ ಪ್ರೊಮೊ ಕಂಡು ಫ್ಯಾನ್ಸ್ ಫಿದಾ

ಬೆಂಗಳೂರು, ನವೆಂಬರ್ 28, 2020 (www.justkannada.in): ಯುವರತ್ನ ಚಿತ್ರದ ಪವರ್ ಆಫ್ ಯೂಥ್ ಹಾಡಿನ ಪ್ರೊಮೊ ಅಭಿಮಾನಿಗಳನ್ನು ಸೆಳೆದಿದೆ.

ಹೌದು. ಯುವರತ್ನ ಚಿತ್ರದ ಪವರ್ ಆಫ್ ಯೂಥ್ ಹಾಡನ್ನು ಡಿಸೆಂಬರ್ 2 ರಂದು ಲಾಂಚ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ವಿಶೇಷ ಎಂದರೆ ಆ ಹಾಡು ಹೇಗಿರಬಹುದು ಎಂಬ ಕುತೂಹಲ ತಣಿಸಲು ಪ್ರೋಮೋವನ್ನು ಬಿಡುಗಡೆ ಮಾಡಿದೆ. ಇದು ಅಭಿಮಾನಿಗಳ ಉತ್ಸಾಹ ಹಾಗೂ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ.

ಹಾಡಿನ ಪ್ರೊಮೊದಲ್ಲಿ ಪುನೀತ್ ಡ್ಯಾನ್ಸ್ ಮೋಡಿಗೆ ಫಿದಾ ಆಗಿದ್ದಾರೆ. ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಈ ಪ್ರೋಮೋ ಬಿಡುಗಡೆಯಾಗಿದೆ. ನಿನ್ನೆ ಸಂಜೆ ಇದ್ದಕ್ಕಿದಂತೆ ಯಾರೂ ನಿರೀಕ್ಷಿಸಿದ ಅಚ್ಚರಿಯ ಉಡುಗೊರೆಯೊಂದನ್ನು ಅಭಿಮಾನಿಗಳಿಗೆ ಚಿತ್ರ ತಂಡ ನೀಡಿದೆ.