ಫೈನಲ್ ಶೂಟಿಂಗ್’ಗೆ ಕೆಜಿಎಫ್ 2 ಟೀಂ ರೆಡಿ !

ಬೆಂಗಳೂರು, ನವೆಂಬರ್ 28, 2020 (www.justkannada.in): ಕೆಜಿಎಫ್ 2 ಚಿತ್ರದ ಫೈನಲ್ ಶೂಟಿಂಗ್’ಗೆ ಚಿತ್ರ ತಂಡ ರೆಡಿಯಾಗಿದೆ.

ಇನ್ನು ಈಗಾಗಲೇ ಚಿತ್ರದ ಫೈನಲ್ ಶೂಟಿಂಗ್ ಗಾಗಿ ಹೈದರಾಬಾದ್ ನಲ್ಲಿ ಚಿತ್ರತಂಡ ಬೀಡುಬಿಟ್ಟಿದೆ. ನಟ ಯಶ್ ಈಗಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಅಧೀರ ಪಾತ್ರ ಮಾಡುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಕೂಡಾ ಮುಂದಿನ ವಾರ ಚಿತ್ರತಂಡವನ್ನು ಕೂಡಿಕೊಳ್ಳಲಿದ್ದಾರೆ. ಸಂಜಯ್ ದತ್ ಮತ್ತು ರಾಕಿ ಭಾಯ್ ನಡುವಿನ ಜಿದ್ದಾಜಿದ್ದಿನ ಫೈಟಿಂಗ್ ದೃಶ್ಯದ ಚಿತ್ರೀಕರಣ ಬಾಕಿಯಿದೆ ಎನ್ನಲಾಗಿದೆ.

ಇದು ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಚಿತ್ರೀಕರಣವಾಗಲಿದೆ. ಸಂಜಯ್ ದತ್ ಕೂಡಾ ಈಗಾಗಲೇ ಹೈದರಾಬಾದ್ ಗೆ ಬಂದಿಳಿದಿದ್ದಾರೆ. ಡಿಸೆಂಬರ್ ಮಧ್ಯಾವಧಿಯಲ್ಲಿ ಕೆಜಿಎಫ್ 2 ಚಿತ್ರೀಕರಣ ಪೂರ್ತಿಯಾಗುವ ನಿರೀಕ್ಷೆಯಿದೆ.