ನಿರೀಕ್ಷಣಾ ಜಾಮೀನು ಸಿಕ್ಕರೇ ವಿಚಾರಣೆಗೆ ಹಾಜರು-ಕೋರ್ಟ್ ನಲ್ಲಿ ಹೆಚ್.ಡಿ ರೇವಣ್ಣ ಪರ ವಾದ

ಬೆಂಗಳೂರು,ಮೇ,4,2024 (www.justkannnada.in): ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಮಹಿಳೆ ಕಿಡ್ನಾಪ್ ಆರೋಪ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಶಾಸಕ ಹೆಚ್.ಡಿ ರೇವಣ್ಣ ಸಲ್ಲಿಸಿರುವ ಅರ್ಜಿ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ನಡೆಯುತ್ತಿದೆ.

ಕೋರ್ಟ್ ನಲ್ಲಿ ಶಾಸಕ ಹೆಚ್ ಡಿ ರೇವಣ್ಣ ಪರ ವಾದ ಮಂಡಿಸಿರುವ ವಕೀಲ ಮೂರ್ತಿ ಡಿನಾಯ್ಕ್, ಬಂಧನದಿಂದ ರಕ್ಷಣೆ ನೀಡಿದರೇ ತನಿಖೆಗೆ ಹಾಜರಾಗಲು ಸಿದ್ದ . ತನಿಖೆ ಉದ್ದೇಶವೇ ಸತ್ಯಾಂಶ ಸಂಗ್ರಹಿಸುವುದು ಎಸ್ ಪಿಪಿ ಆಕ್ಷೇಫಣೆಯಲ್ಲಿ ಪ್ರಜ್ವಲ್ ಮೇಲೆ ಆರೋಪ ಮಾಡಲಾಗಿದೆ. ಪ್ರಜ್ವಲ್  ಮೇಲಿನ ಆರೋಪಕ್ಕೆ ಹೆಚ್.ಡಿ ರೇವಣ್ಣ ಹೊಣೆಗಾರರೇ ಎಂದಿದ್ದಾರೆ.

ರೇವಣ್ಣ ವಿರುದ್ದ ಯಾವುದೇ ಗಂಭೀರ ಆರೋಪವಿಲ್ಲ. ರೇವಣ್ಣ ವಿರುದ್ದದ ಆರೋಪಕ್ಕೆ ಯಾವುದೇ ಸಾಕ್ಷಿಇಲ್ಲ. ನಿರೀಕ್ಷಣಾ ಜಾಮೀನು ಸಿಕ್ಕರೆ ಎಸ್ ಐಟಿ ತನಿಖೆಗೆ ಸಹಕಾರ ನೀಡುತ್ತಾರೆ. ಮೊದಲು ಜಾಮೀನು ಸಿಕ್ಕರೇ ಎಸ್ ಐಟಿ ವಿಚಾರಣೆಗೆ ಹಾಜರಾಗುತ್ತಾರೆ ಎಂದು ಹೆಚ್ ಡಿ ರೇವಣ್ಣ ಪರ ವಕೀಲ  ಮೂರ್ತಿ ಡಿನಾಯ್ಕ್ ಕೋರ್ಟ್ ಗೆ ತಿಳಿಸಿದ್ದಾರೆ.

Key words: anticipatory bail, hearing,  HD Revanna , court