ಎರಡು ಮೂರು ದಿನಗಳಲ್ಲಿ ಸಚಿವರ ಪಟ್ಟಿ ಬರಬಹುದು- ಸಿಎಂ ಬಿಎಸ್ ವೈ ಸ್ಪಷ್ಟನೆ…

ಬೆಂಗಳೂರು,ನವೆಂಬರ್,19,2020(www.justkannada.in):  ರಾಜ್ಯ ಸಚಿವ ಸಂಪುಟದ ವಿಸ್ತರಣೆ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದು, ಇನ್ನು ಎರಡು- ಮೂರು ದಿನದಲ್ಲಿ ಸಚಿವರ ಪಟ್ಟಿ ಬರಬಹುದು ಎಂದು ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣ ಬಳಿ ಇಂದು ಮಾಧ್ಯಮದ ಜತೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ,  ವರಿಷ್ಠರಿಗೆ ಸಚಿವಾಕಾಂಕ್ಷಿಗಳ ಪಟ್ಟಿ ನೀಡಿದ್ದೇನೆ.  ಎರಡು ಮೂರು ದಿನಗಳಲ್ಲಿ ಹೈಕಮಾಂಡ್ ಸಚಿವರ ಪಟ್ಟಿ ಕಳಳುಹಿಸಲಿದೆ.  ಸಚಿವ ಸಂಪುಟ ವಿಸ್ತರಣೆಯೋ ಪುನರಚನೆಯೋ ನೋಡೋಣಾ ಎಂದರು.

ನಿನ್ನೆ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಚರ್ಚೆ ನಡೆಸಿದ್ದ ಸಿಎಂ ಬಿಎಸ್ ವೈ ಜೆ.ಪಿ ನಡ್ಡಾ  ಅವರೊಂದಿಗೆ ಸೌಹಾರ್ದಯುತ ಚರ್ಚೆ ನಡೆದಿದೆ. ಸಂಪುಟ ವಿಸ್ತರಣೆಗೆ ಅವಕಾಶ ಕೋರಿದ್ದೇನೆ. ಮುಂದಿನ 2 -3 ದಿನಗಳಲ್ಲಿ ಈ ವಿಚಾರ ಚರ್ಚಿಸಿ, ತಿಳಿಸುವುದಾಗಿ ಬಿಎಸ್ ವೈಹೇಳಿದ್ದರು.

Key words:  list -ministers -could come – two – three days-CM BS Yeddyurappa- Clear.