Tuesday, October 6, 2026

BDA Apartments

ತನಿಖೆಗೆ ಬೇಕಾದ ಪೂರಕ ದಾಖಲೆ ಒದಗಿಸುತ್ತೇನೆ- ವಿಚಾರಣೆಗೆ ಹಾಜರಾದ ದಿನೇಶ್ ಕಲ...
Home Cinema ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ : ನಟಿ ಅನುಶ್ರೀ

ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ : ನಟಿ ಅನುಶ್ರೀ

ಮಂಗಳೂರು,ಸೆಪ್ಟಂಬರ್,26,2020(www.justkannada.in) : ಪೊಲೀಸರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇನೆ. ಇನ್ನೇನಾದ್ರೂ ವಿಚಾರಣೆಗೆ ಬರಬೇಕು ಅಂತ ಕರೆದರೆ ಬರುತ್ತೇನೆ ಎಂದು ನಟಿ,ನಿರೂಪಕಿ ಅನುಶ್ರೀ ಹೇಳಿದ್ದಾರೆ.

jk-logo-justkannada-logo

ಡ್ರಗ್ ನಂಟು ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರಿಂದ ನೋಟಿಸ್ ಬಂದ ಹಿನ್ನೆಲೆಯಲ್ಲಿ ನಿರೂಪಕಿ ಅನುಶ್ರೀ ಪಣಂಬೂರಿನ ಎಸಿಪಿ ಕಚೇರಿಯಲ್ಲಿ ಸುದೀರ್ಘ ನಾಲ್ಕು ಗಂಟೆಗಳ ಕಾಲ ವಿಚಾರಣೆಗೆ ಒಳಪಟ್ಟರು.

ಬಳಿಕ ಮಾತನಾಡಿದ ಅವರು, 12 ವರ್ಷಗಳ ಹಿಂದೆ ಕಿಶೋರ್ ಮತ್ತು ತರುಣ್ ನನಗೆ ಕೊರಿಯೋಗ್ರಾಫ್ ಮಾಡಿದ್ದರು. ಅದಷ್ಟೇ ನಮಗೆ ಪರಿಚಯ. ಆನಂತರ ಅವರ ಜೊತೆ ಬೇರೆ ಯಾವುದೇ ಸಂಬಂಧ ಹೊಂದಿಲ್ಲ. ನಾನು ಯಾವ ಪಾರ್ಟಿನೂ ಮಾಡಿಲ್ಲ. ಪಾರ್ಟಿಗೆ ಹೋಗಿಯೂ ಇಲ್ಲ ಎಂದು ಹೇಳಿದ್ದಾರೆ.

nswered-all-questions-asked-police-actress Anushree

ಸಿನಿಮಾ ರಂಗದಲ್ಲಿ ಡ್ರಗ್ಸ್ ಬಗ್ಗೆ ಕೇಳಿದ ಪ್ರಶ್ನೆಗೆ, ಪೊಲೀಸರು ಎಲ್ಲ ಸೇರಿ ತನಿಖೆ ನಡೆಸುತ್ತಿದ್ದಾರೆ. ಡ್ರಗ್ಸ್ ನಮ್ಮ ಸಮಾಜ, ನಾಡನ್ನು ಕಾಡುತ್ತಿರುವ ಭೂತ. ಅದನ್ನು ನಿವಾರಿಸಲು ಎಲ್ಲರೂ ಪೊಲೀಸರ ಜೊತೆ ಕೈಜೋಡಿಸಬೇಕು. ನಾನು ಜವಾಬ್ದಾರಿಯುತ ನಾಗರಿಕಳಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಎಲ್ಲರೂ ಪೊಲೀಸರಿಗೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ.

key words : answered-all-questions-asked-police-actress Anushree