ದಸರಾ ಮಹೋತ್ಸವ ಅರಮನೆ ಮತ್ತು ರಾಜಮನೆತನದ ಕುಟುಂಬಕ್ಕೆ ಸೀಮಿತವಾಗಲಿ : ಮಾಜಿ ಶಾಸಕ ವಾಸು

ಮೈಸೂರು,ಸೆಪ್ಟೆಂಬರ್,26,2020(www.justkannada.in) : ಈ ಬಾರಿಯ ದಸರಾ ಮಹೋತ್ಸವ ಮೈಸೂರು ಅರಮನೆ ಮತ್ತು ರಾಜಮನೆತನದ ಕುಟುಂಬಕ್ಕೆ ಸೀಮಿತವಾಗಲಿ ಎಂದು ಮಾಜಿ ಶಾಸಕ ವಾಸು ಹೇಳಿದ್ದಾರೆ.jk-logo-justkannada-logo

ದಸರಾ ಆಚರಣೆ ಬೇಡವೆಂದು ನಾನು ಹೇಳುವುದಿಲ್ಲ, ಈ ಬಾರಿಯ ದಸರಾ ಮಹೋತ್ಸವ ಭಾವನಾತ್ಮಕತೆಗೆ ಸೀಮಿತವಾಗಲಿ. ಮೈಸೂರು ಅರಮನೆ, ರಾಜಮನೆತನಕ್ಕೆ ಸೀಮಿತವಾಗಬೇಕು ಎಂದಿದ್ದಾರೆ.

15 ಕೋಟಿ ಅನುದಾನ ಕೆ. ಆರ್. ಆಸ್ಪತ್ರೆ ಮತ್ತು ಕೋವಿಡ್ ಆಸ್ಪತ್ರೆಗೆ ನೀಡಿ

ದಸರಾಗೆ ನೀಡುವ 15 ಕೋಟಿ ಅನುದಾನವನ್ನು ಮೈಸೂರಿನ ಕೆ. ಆರ್. ಆಸ್ಪತ್ರೆ ಮತ್ತು ಕೋವಿಡ್ ಆಸ್ಪತ್ರೆಗೆ ನೀಡಿದರೆ ಸಾಕಷ್ಟು ಬಡವರ ಪ್ರಾಣವನ್ನು ಉಳಿಸಲು‌ ಸಹಕಾರಿಯಾಗಲಿದೆ. ಕೋವಿಡ್ ಆಸ್ಪತ್ರೆಗಳಲ್ಲಿರುವ ಆಕ್ಸಿಜನ್, ವೆಂಟಿಲೇಟರ್ ಕೊರತೆ ನೀಗಿಸಲು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಇನ್ಸೂರೆ‌ನ್ಸ್ ಮಾಡಿಸಲು, ಜೀವ ರಕ್ಷಣೆಗೆ ದಸರಾ ಅನುದಾನ ಬಳಕೆಯಾಗಲಿ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

key words : Dasara Mahotsava-confined-palace-royal-family-Former MLA Vasu