Tuesday, October 6, 2026

BDA Apartments

ನಾಳೆ ರಾಷ್ಟ್ರಪತಿ ಭೇಟಿ ಹಿನ್ನೆಲೆ: ತಲಕಾವೇರಿ- ಭಾಗಮಂಡಲ ದೇವಾಲಯಕ್ಕೆ ಭಕ್ತರ...
Home Front Page ಕರ್ನಾಟಕ ಪಿಕಲ್‌ ಬಾಲ್ ಪ್ರೀಮಿಯರ್ ಲೀಗ್ (KPPL): ಜೆರ್ಸಿ ಅನಾವರಣ

ಕರ್ನಾಟಕ ಪಿಕಲ್‌ ಬಾಲ್ ಪ್ರೀಮಿಯರ್ ಲೀಗ್ (KPPL): ಜೆರ್ಸಿ ಅನಾವರಣ

ಬೆಂಗಳೂರು, ಅಕ್ಟೋಬರ್,6,2026 (www.justkannada.in): ಕರ್ನಾಟಕ ಸ್ಟೇಟ್ ಪಿಕಲ್‌ ಬಾಲ್ ಅಸೋಸಿಯೇಷನ್ (KSPA) ಮತ್ತು ಎಂಟ್ರೋಪಿ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ (ESE) ಸಹಯೋಗದಲ್ಲಿ ನಡೆಯುತ್ತಿರುವ ಪ್ರಥಮ ಆವೃತ್ತಿಯ ‘ಕರ್ನಾಟಕ ಪಿಕಲ್‌ ಬಾಲ್ ಪ್ರೀಮಿಯರ್ ಲೀಗ್’ (KPPL) ಟೂರ್ನಿಯ ಅಧಿಕೃತ ಜೆರ್ಸಿ ಬಿಡುಗಡೆ ಸಮಾರಂಭವು ಬೆಂಗಳೂರಿನ ಫೀನಿಕ್ಸ್ ಮಾರ್ಕೆಟ್‌ ಸಿಟಿಯಲ್ಲಿ ಜರುಗಿತು.

ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ಏಳು ಪ್ರಾಂಚೈಸಿಗಳಾದ ಬಳ್ಳಾರಿ ಟೈಗರ್ಸ್, ಬೆಂಗಳೂರು ಚಾರ್ಜರ್ಸ್, ಮಂಗಳೂರು ರೋರರ್ಸ್, ಕೂರ್ಗ್ ಒರಿಜಿನಲ್ಸ್, ಬೆಳಗಾವಿ ಬ್ಯಾರನ್ಸ್, ತುಮಕೂರು ಟೈಟನ್ಸ್ ಮತ್ತು ಮೈಸೂರು ರಾಯಲ್ಸ್ ತಂಡಗಳ ಆಟಗಾರರು ತಮ್ಮ ತಂಡದ ಜೆರ್ಸಿಗಳನ್ನು ಅನಾವರಣಗೊಳಿಸಿದರು.Karnataka kppl1

ಕಾರ್ಯಕ್ರಮದಲ್ಲಿ KPPL ನಾಯಕರೊಂದಿಗೆ, ತಂಡಗಳ ಮಾಲೀಕರು, ತರಬೇತುದಾರರು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು. ಈ ಕೂಟದ ಪ್ರಮುಖ ಆಕರ್ಷಣೆಯಾಗಿ ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ KPPL ಬ್ರ್ಯಾಂಡ್ ಅಂಬಾಸಿಡರ್ ಶ್ರೀಮುರಳಿ ಅವರು ಆಗಮಿಸಿ ಜೆರ್ಸಿ ಅನಾವರಣಗೊಳಿಸಿ ಶುಭ ಹಾರೈಸಿದರು.Karnataka jk02_new jk02 new

ತಂಡಗಳ ಹರಾಜು ಮತ್ತು ಆಟಗಾರರ ಆಯ್ಕೆ ಪ್ರಕ್ರಿಯೆಯ ನಂತರ ನಡೆದ ಈ ಜೆರ್ಸಿ ಬಿಡುಗಡೆ ಕಾರ್ಯಕ್ರಮವು, ರಾಜ್ಯದಲ್ಲಿ ಪಿಕಲ್‌ ಬಾಲ್ ಕ್ರೀಡೆಯ ಜಾಗೃತಿಯನ್ನು ಹೆಚ್ಚಿಸುವ ಜೊತೆಗೆ ಮೊದಲ ಆವೃತ್ತಿಯ ಪಂದ್ಯಾವಳಿಗೆ ಬಿರುಸಿನ ಚಾಲನೆ ನೀಡಿದೆ.

 

English Summary
Title

Karnataka Pickleball Premier League (KPPL) Season 1 Jersey Unveiled

Short Description
The official jerseys for the inaugural Karnataka Pickleball Premier League (KPPL) Season 1 have been officially unveiled at Phoenix Marketcity, Bengaluru. Sandalwood actor Sriimurali, the league's brand ambassador, led the star-studded kit launch. Organized by the Karnataka State Pickleball Association (KSPA), the event showcased unique team kits for franchises like the Mysuru Royals and Mangaluru Roarers. With the player draft complete, seven franchise teams are geared up to compete in the action-packed tournament from October 9 to 11, 2026, at GKVK Bengaluru.
Keywords
Karnataka, Pickle Ball Premier League, (KPPL), Jersey, Unveiled