Tuesday, November 17, 2026

Dasara Wishes

Ammannamma Kalyani DasraWishes_JK DasraWishes JK
Happy Dasara
Home Front Page ಐತಿಹಾಸಿಕ ಅಮ್ಮಣ್ಣಮ್ಮನ ಕಲ್ಯಾಣಿ ಸ್ವಚ್ಛ: ಗ್ರಾಮಸ್ಥರು, ಪರಿತ್ರಾಣ ಫೌಂಡೇಶನ್‌ನಿಂದ ಶ್ರಮದಾನ

ಐತಿಹಾಸಿಕ ಅಮ್ಮಣ್ಣಮ್ಮನ ಕಲ್ಯಾಣಿ ಸ್ವಚ್ಛ: ಗ್ರಾಮಸ್ಥರು, ಪರಿತ್ರಾಣ ಫೌಂಡೇಶನ್‌ನಿಂದ ಶ್ರಮದಾನ

 

ಪಾಂಡವಪುರ, ಅ.6: ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಮಾಣಿಕ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡಗೆರೆ ಗ್ರಾಮದ ಐತಿಹಾಸಿಕ ಅಮ್ಮಣ್ಣಮ್ಮನ ಕಲ್ಯಾಣಿಯನ್ನು ಪರಿತ್ರಾಣ ಫೌಂಡೇಶನ್ ಬೆಂಗಳೂರು ಹಾಗೂ ಗ್ರಾಮಸ್ಥರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದಾರೆ.

ಸುಮಾರು 300 ಅಡಿ ಉದ್ದ, 300 ಅಡಿ ಅಗಲ ಹಾಗೂ 30 ಅಡಿ ಆಳ ಹೊಂದಿರುವ ಈ ಬೃಹತ್ ಕಲ್ಯಾಣಿ, ಮೈಸೂರು ಅರಸರ ಕಾಲದ ಐತಿಹಾಸಿಕ ಜಲಮೂಲವೆಂದು ಸ್ಥಳೀಯರು ತಿಳಿಸಿದರು. ಐತಿಹಾಸಿಕ ದಾಖಲೆಗಳ ಪ್ರಕಾರ ಯದುವಂಶದ ಅರಸ ಚಿಕ್ಕದೇವರಾಜ ಒಡೆಯರ್ (1673–1704) ಅವರು ತಮ್ಮ ಧರ್ಮಪತ್ನಿಯ ಸ್ಮರಣಾರ್ಥ ಈ ಕಲ್ಯಾಣಿಯನ್ನು ನಿರ್ಮಿಸಿದ್ದಾರೆ ಎನ್ನಲಾಗಿದೆ.

Ammannamma Kalyani jk02_new jk02 new

ಒಂದು ಕಾಲದಲ್ಲಿ ಜಲಸಮೃದ್ಧವಾಗಿದ್ದ ಕಲ್ಯಾಣಿಯು ಮಳೆ ಕೊರತೆ ಹಾಗೂ ನಿರ್ವಹಣೆಯ ಅಭಾವದಿಂದ ಕಸ-ಕಡ್ಡಿ ಮತ್ತು ಗಿಡಗಂಟಿಗಳಿಂದ ಆವೃತವಾಗಿ ಪಾಳುಬಿದ್ದಿತ್ತು. ಇದನ್ನು ಸಂರಕ್ಷಿಸುವ ಉದ್ದೇಶದಿಂದ ಗ್ರಾಮಸ್ಥರೊಂದಿಗೆ ಪರಿತ್ರಾಣ ಫೌಂಡೇಶನ್‌ನ ಸ್ಥಾಪಕ ಸಚಿನ್ ಶಂಕರ್ ಹಾಗೂ ತಂಡದ ಸದಸ್ಯರು ಮೂರು ಭಾನುವಾರಗಳ ಕಾಲ ಶ್ರಮದಾನ ನಡೆಸಿ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದ್ದಾರೆ.

ಪಾಂಡವಪುರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗ್ರಾಮಕ್ಕೆ ಭೇಟಿ ನೀಡಿ ಕಾರ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಲ್ಯಾಣಿಗೆ ಜಲಮರುಪೂರಣ ವ್ಯವಸ್ಥೆ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Gowdagere village PANDAVAPURA

ಐತಿಹಾಸಿಕ ಪರಂಪರೆ ಹಾಗೂ ಅಮೂಲ್ಯ ಜಲಮೂಲವನ್ನು ಉಳಿಸುವ ಈ ಪ್ರಯತ್ನಕ್ಕೆ ಗ್ರಾಮಸ್ಥರು, ಯುವಜನರು ಮತ್ತು ಪರಿತ್ರಾಣ ಫೌಂಡೇಶನ್ ತಂಡದ ಸದಸ್ಯರಾದ ಸಚಿನ್ ಶಂಕರ್, ಮಹೇಶ್, ಸಂತೋಷ್, ದಿವ್ಯ, ಪವನ್, ನಾಗೇಶ್ ಹಾಗೂ ಲಿಖಿತ್ ಸೇರಿದಂತೆ ಹಲವರು ಕೈಜೋಡಿಸಿದ್ದಾರೆ.

ಭವಿಷ್ಯದಲ್ಲಿ ಕಲ್ಯಾಣಿಗೆ ಮತ್ತೆ ನೀರು ತುಂಬಿ, ಗ್ರಾಮಸ್ಥರು ಹಾಗೂ ಜಾನುವಾರುಗಳಿಗೆ ಉಪಯುಕ್ತ ಜಲಮೂಲವಾಗಬೇಕು ಎಂಬುದು ಗ್ರಾಮಸ್ಥರ ಆಶಯವಾಗಿದೆ.

KEY WORDS: 

Ammannamma Kalyani, Gowdagere village, Pandavapura, historic water tank, Mandya, heritage Paritrana Foundation, Mysuru royal era, Shramadana, Heritage conservation

Pandavapura KALAYANI

English Summary
Title

Historic Ammannamma Kalyani in Pandavapura Cleaned Through Community Shramadana

Short Description
Pandavapura, Oct. 6, 2026: The historic Ammannamma Kalyani at Gowdagere village in Pandavapura taluk, Mandya district, has been cleaned through a community-led Shramadana initiative by Paritrana Foundation, Bengaluru, and local residents. Measuring about 300 ft by 300 ft and 30 ft deep, the water tank is believed to date back to the Mysuru royal era. Historical records suggest that Chikkadevaraja Wodeyar (1673–1704) built it in memory of his wife. Neglected for years, the Kalyani was covered with waste and vegetation. Volunteers carried out cleaning work over three Sundays to help preserve the historic water body.
Keywords
Ammannamma Kalyani, Gowdagere village, Pandavapura, historic water tank, Mandya, heritage Paritrana Foundation, Mysuru royal era, Shramadana, Heritage conservation