Friday, August 14, 2026

BDA Apartments

Home Front Page ಕಮಿಷನ್ ಆರೋಪ: ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ದ ದಾಖಲೆ ಸಲ್ಲಿಸಿದ ಕೆಂಪಣ್ಣ.

ಕಮಿಷನ್ ಆರೋಪ: ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ದ ದಾಖಲೆ ಸಲ್ಲಿಸಿದ ಕೆಂಪಣ್ಣ.

ಬೆಂಗಳೂರು, ಡಿಸೆಂಬರ್ ​​,7,2023(www.justkannada.in):  ಕಮಿಷನ್ ಮತ್ತು ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರ ಮತ್ತು ಈಗಿನ ಕಾಂಗ್ರೆಸ್ ಸರ್ಕಾರದ ವಿರುದ್ದ ನಿವೃತ್ತ ನ್ಯಾ.ಹೆಚ್‌.ಎನ್.ನಾಗಮೋಹನ್ ದಾಸ್‌ ಸಮಿತಿಗೆ  ರಾಜ್ಯ  ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ದಾಖಲೆ ಸಲ್ಲಿಸಿದ್ದಾರೆ.

ಬಿಜೆಪಿ ಮತ್ತು ಹಾಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ 6 ಸಾವಿರ ಪುಟಗಳ ಭ್ರಷ್ಟಾಚಾರದ ದಾಖಲೆಯನ್ನು ನಿವೃತ್ತ ನ್ಯಾ.ಹೆಚ್‌.ಎನ್.ನಾಗಮೋಹನ್ ದಾಸ್‌ ಸಮಿತಿಗೆ  ಕೆಂಪಣ್ಣ  ಸಲ್ಲಿದ್ದಾರೆ. ಬಿಜೆಪಿ, ಹಾಲಿ ಸರ್ಕಾರದಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಕಚೇರಿಗೆ ಆಡಿಯೋ, ವಿಡಿಯೋ ಹಾಗೂ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿದೆ.

 

ಈ ಕುರಿತು ಮಾತನಾಡರುವ ಕೆಂಪಣ್ಣ,  ಸಿದ್ದರಾಮಯ್ಯ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆಯುತ್ತಿದ್ದು, ಬಿಜೆಪಿ ಸರ್ಕಾರ, ಹಾಲಿ ಸರ್ಕಾರದ ವಿರುದ್ಧ ದಾಖಲೆಗಳನ್ನ ಸಲ್ಲಿಸಿದ್ದೇನೆ. ಎಲ್ಲಾ ಇಲಾಖೆಯ ಕಾಮಗಾರಿಗೆ ಸಂಬಂಧಿಸಿದ ದಾಖಲೆ ಸಲ್ಲಿಸಿದ್ದೇನೆ. ಎಲ್ಲಾ ಜಿಲ್ಲೆಗಳ ಕಾಮಗಾರಿ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು  ತಿಳಿಸಿದ್ದಾರೆ.

ಕಮಿಷನ್ ನೀಡಿದವರೆಗೆ ಮಾತ್ರ ಬಿಲ್ ಪಾವತಿ ಮಾಡಲಾಗಿದ್ದು, ಹಿರಿತನದ  ಆಧಾರದ ಮೇಲೆ ಬಿಲ್ ಪಾವತಿ ಮಾಡದ ಆರೋಪ ದಾಖಲೆ ಸಲ್ಲಿಸಲಾಗಿದೆ ಎಂದು ಕೆಂಪಣ್ಣ ತಿಳಿಸಿದ್ದಾರೆ.

Key words: Alleged- commission-Kempanna – document -against – BJP – Congress government