ಸಾವರ್ಕರ್ ಫೋಟೊ ತೆಗೆಯುವ ವಿಚಾರ: ಸ್ಪೀಕರ್ ಯು.ಟಿ ಖಾದರ್ ಸ್ಪಷ್ಟನೆ.

ಬೆಳಗಾವಿ,ಡಿಸೆಂಬರ್,7,2023(www.justkannada.in):  ಅಧಿವೇಶನದಲ್ಲಿ  ವೀರ್ ಸಾರ್ವಕರ್ ಫೋಟೊ ತೆಗೆಯುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸ್ಪೀಕರ್ ಯುಟಿ ಖಾದರ್, ಸಾರ್ವಕರ್ ಫೋಟೊ ತೆಗೆಯುವ ಯಾವುದೇ ಪ್ರಸ್ತಾಪವಿಲ್ಲ ಅಂತಹ  ಪ್ರಸ್ತಾವ  ಬಂದರೇ ನೋಡೋಣ. ಈಗಲೇ ಬ್ಯಾಟ್ ಬೀಸಿದ್ರೆ ಆಗುತ್ತಾ ಎಂದರು.

ಸಂವಿಧಾನ ಬದ್ಧವಾಗಿ ಕೆಲಸ ಮಾಡುತ್ತಿದ್ದೇವೆ. ನನಗೆ ಸಚಿವರೂ  ಒಂದೇ ಪ್ರತಿಕ್ಷದವರೂ ಒಂದೇ  ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅವರವರ ಹೇಳಿಕೆ ನೀಡಲು ಅವಕಾಶವಿದೆ. ಯಾವುದೇ ವಿಚಾರವಿದ್ದರೂ ಸಂವಿಧಾನ ಬದ್ದವಾಗಿ ಕೆಲಸ ನಿರ್ವಹಿಸುವೆ ಎಂದು ಸ್ಪೀಕರ್  ಯುಟಿ ಖಾದರ್ ತಿಳಿಸಿದರು.

Key words: Savarkar –photo- issue-Speaker -UT Khader