Tuesday, September 29, 2026

BDA Apartments

ಡಿಕೆಶಿ ಕಳೆದು ಹೋಗಿದ್ದಾರೆಂಬ ಬಿಜೆಪಿ ನಾಯಕರ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕ...
Home Front Page ಡಿಕೆಶಿ ಕಳೆದು ಹೋಗಿದ್ದಾರೆಂಬ ಬಿಜೆಪಿ ನಾಯಕರ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಟಾಂಗ್.

ಡಿಕೆಶಿ ಕಳೆದು ಹೋಗಿದ್ದಾರೆಂಬ ಬಿಜೆಪಿ ನಾಯಕರ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಟಾಂಗ್.

ಬೆಳಗಾವಿ,ಡಿಸೆಂಬರ್, 7,2023(www.justkannada.in): ರಾಜ್ಯದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾದರೂ ಸಹ ಸದನಕ್ಕೆ ಆಗಮಿಸದೇ ತೆಲಂಗಾಣ ವಿಧಾನಸಭೆ ಚುನಾವಣೆ ಕಡೆ ಬ್ಯೂಸಿಯಾಗಿದ್ದ ಡಿಸಿಎಂ ಡಿಕೆ ಶಿವಕುಮಾರ್  ಇಂದು ಸದನಕ್ಕೆ ಆಗಮಿಸಿದ್ದಾರೆ.

ಈ ಸಂಬಂಧ ಡಿ.ಕೆ ಶಿವಕುಮಾರ್ ಕಾಣೆಯಾಗಿದ್ದಾರೆ ಎಂದು ಲೇವಡಿ ಮಾಡಿದ್ದ ಬಿಜೆಪಿನಾಯಕರಿಗೆ ತಿರುಗೇಟು ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಬಹಳ ಸಂತೋಷ  ನನ್ನನ್ನ ಹುಡುಕುತ್ತಿದ್ದಾರಲ್ಲ. ನಾನೂ ಕಳೆದು ಹೋಗಿದ್ದೀನಿ ಅನ್ನೋ ಕನಿಕರ ಇದೆಯಲ್ಲ.  ವಿಪಕ್ಷದವರು ಏನೇಲ್ಲ ಗಮನ ಸೆಳೆಯಬೇಕು ಸೆಳೆಯಲಿ.  ವಿಪಕ್ಷದವರಿಗೆ ಸದನದಲ್ಲಿ ಉತ್ತರ ಕೊಡುವೆ ಎಂದರು.ಡಿಕೆಶಿ ಕಳೆದು ಹೋಗಿದ್ದಾರೆಂಬ ಬಿಜೆಪಿ ನಾಯಕರ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕ...

ಸಿಎಂ ಸಿದ್ದರಾಮಯ್ಯರಿಂದ ಮುಸ್ಲೀಂ ಒಲೈಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಎಲ್ಲಾ ಜನಾಂಗದವರನ್ನ ರಕ್ಷಣೆ ಮಾಡಬೇಕು.  ಮಾಡುತ್ತೇವೆ. ಸಂವಿಧಾನ ಎಲ್ಲರಿಗೂ ಸಹಾಯ ಮಾಡುವಂತೆ ಹೇಳಿದೆ ಎಲ್ಲರಿಗೂ ಸಹಾಯ ಮಾಡುತ್ತೇವೆ.  ಎಲ್ಲರಿಗೂ ಸಮಪಾಲು ಎಲ್ಲರಿಗೂ ಸಮಬಾಳು ಎಂದು ನುಡಿದರು.

Key words: No proposal – Savarkar’s photo – Speaker -UT Khader