ಕಾಂಗ್ರೆಸ್ ಶಾಸಕನ ವಿರುದ್ಧ ಸ್ಟೇಟಸ್ ಹಾಕಿದ ಆರೋಪ: ಮಹಿಳಾ ಕಾನ್ಸ್ ​​ಟೇಬಲ್ ಸಸ್ಪೆಂಡ್.

ಚಿಕ್ಕಮಗಳೂರು,ಆಗಸ್ಟ್,12,2023(www.justkannada.in): ಚಿಕ್ಕಮಗಳೂರು ಜಿಲ್ಲೆ ಕಡೂರು ಕ್ಷೇತ್ರ ಕಾಂಗ್ರೆಸ್ ಶಾಸಕ ಆನಂದ್​​​ ವಿರುದ್ಧ ಸ್ಟೇಟಸ್​​​ ಹಾಕಿದ ಆರೋಪದ ಮೇಲೆ ಕಡೂರು ಪೊಲೀಸ್ ಠಾಣೆ ಮಹಿಳಾ ಕಾನ್ಸ್​​ಟೇಬಲ್​​​ ಅಮಾನತು ಮಾಡಲಾಗಿದೆ.

ಕಡೂರು ಪೊಲೀಸ್  ಠಾಣೆಯ ಮಹಿಳಾ ಕಾನ್ಸ್​​ಟೇಬಲ್  ಲತಾ ಅಮಾನತಾದವರು.  ಶಾಸಕ ಆನಂದ್  ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮಹಿಳಾ ಕಾನ್ಸ್ ಟೇಬಲ್ ಲತಾ, ನನಗೆ ಏನಾದರೂ ತೊಂದರೆಯಾದರೆ ಕಡೂರು ಶಾಸಕ ಕಾರಣ. ಕಡೂರು ಶಾಸಕರಿಗೆ ನನ್ನ ಧಿಕ್ಕಾರ ಎಂದು ವಾಟ್ಸ್​​​ಆ್ಯಪ್ ಸ್ಟೇಟಸ್​​​ನಲ್ಲಿ ಉಲ್ಲೇಖಿಸಿದ್ದರು.

ಈ ಮಧ್ಯೆ, ಶಾಸಕ ಆನಂದ್ ವಿರುದ್ಧ ಪೋಸ್ಟ್ ಮಾಡಿದ್ದಕ್ಕೆ ಮಹಿಳಾ ಕಾನ್ಸ್ ಟೇಬಲ್ ಲತಾರನ್ನ ಅಮಾನತು ಮಾಡಿ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಅವರು ಆದೇಶ ಹೊರಡಿಸಿದ್ದಾರೆ.

Key words: Allegation – status -against -Congress MLA – constable -suspended.