ಅತ್ಯಾಚಾರ ಬೆದರಿಕೆ ಆರೋಪ: ನಟ ನಿರ್ಮಾಪಕ ವೀರೇಂದ್ರ ಬಾಬು ಬಂಧನ.

ಬೆಂಗಳೂರು,ಆಗಸ್ಟ್,12,2023(www.justkannada.in): ಮಹಿಳೆಗೆ ಅತ್ಯಾಚಾರ ಬೆದರಿಕೆ ಹಾಕಿದ  ಆರೋಪದ ಮೇಲೆ ನಟ ನಿರ್ಮಾಪಕ ಸ್ವಯಂಕೃಷಿ ವೀರೇಂದ್ರ ಬಾಬುರನ್ನು ಕೊಡಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ವೀರೇಂದ್ರ ಬಾಬು ಅವರು ಮಹಿಳೆಯನ್ನು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿಡಿಯೋ ತೋರಿಸಿ 15 ಲಕ್ಷ ರೂಪಾಯಿ ನೀಡುವಂತೆ ವೀರೇಂದ್ರ ಬಾಬು ಬ್ಲಾಕ್​ಮೇಲ್ ಮಾಡಿದ್ದರು ಎನ್ನುವ ಆರೋಪ ಇದೆ. ಮಹಿಳೆ ಅಂದು ಒಡವೆ ಮಾರಿ ಹಣ ನೀಡಿ ಸುಮ್ಮನಾಗಿದ್ದರು. ಆದರೆ ಕಳೆದ ಜುಲೈ 30ರಂದು ಮತ್ತೆ ಮಹಿಳೆಯನ್ನು ವೀರೇಂದ್ರ ಬಾಬು ಕರೆಸಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ದೂರು ದಾಖಲಿಸಿದ್ದು . ಇದನ್ನು ಆಧರಿಸಿ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಆರೋಪದಡಿ ವೀರೇಂದ್ರ ಬಾಬು ಹಾಗೂ ಸ್ನೇಹಿತರ ಮೇಲೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಸದ್ಯ ಕೊಡಿಗೆಹಳ್ಳಿ ಪೊಲೀಸರಿಂದ ಅರೋಪಿ ಅರೆಸ್ಟ್ ಮಾಡಲಾಗಿದೆ.

Key words: Alleged-rape –threats-Actor- producer – Virendra Babu- arrested