40% ಕಮಿಷನ್ ಬಗ್ಗೆ ತನಿಖೆಯಾಗದೆ ಬಿಲ್, ಪಾವತಿ ಸಾಧ್ಯವಿಲ್ಲ- ಸಿಎಂ ಸಿದ‍್ಧರಾಮಯ್ಯ.

ಮೈಸೂರು,ಆಗಸ್ಟ್,12,2023(www.justkannada.in):  ಬಿಲ್  ಪಾವತಿಗೆ ಗುತ್ತಿಗೆದಾರರು ಆಗ್ರಹ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ಧರಾಮಯ್ಯ,  ಬಿಜೆಪಿ ಅವಧಿಯಲ್ಲಿನ 40% ಕಮಿಷನ್ ಬಗ್ಗೆ ತನಿಖೆಯಾಗದೆ ಬಿಲ್ ಪಾವತಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ‍್ಧರಾಮಯ್ಯ, 40 ಪರ್ಸೆಂಟ್ ಕಮಿಷನ್ ವಿಚಾರಕ್ಕೆ ಜನರು ಬಿಜೆಪಿ ತಿರಸ್ಕಾರ ಮಾಡಿದ್ದಾರೆ. ಬಿಜೆಪಿ ವಿರುದ್ಧದ ಕಮಿಷನ್ ಆರೋಪ ಸಾಬೀತುಪಡಿಸಬೇಕಿದೆ. 40 ಪರ್ಸೆಂಟ್ ಕಮಿಷನ್ ಬಗ್ಗೆ ನಾಲ್ಕು ತಂಡದಿಂದ ತನಿಖೆ ನಡೆಯುತ್ತಿದೆ.  ತನಿಖೆ ಮುಗಿಯದೇ ಬಿಲ್ ಪಾವತಿ ಸಾಧ್ಯವಿಲ್ಲ. ತನಿಖಾಯಾಗದೇ ಬಿಲ್ ಪಾವತಿ ಹೇಗೆ..? ತಪ್ಪು ಮಾಡದ ಗುತ್ತಿಗೆದಾರರಿಗೆ ಸಮಸ್ಯಯಾಗಲ್ಲ. ಆದರೆ ತಪ್ಪು ಮಾಡಿದ ಗುತ್ತಿಗೆದಾರರಿಗೆ ಸಮಸ್ಯೆಯಾಗಲಿದೆ. ಕಾಮಗಾರಿಗಳೆಲ್ಲಾ 3 ವರ್ಷದ ಹಿಂದೆಯೇ ಮುಗಿದಿದೆ. ಈಗ ಬಿಲ್ ಗಾಗಿ ಆತುರಪಟ್ಟರೇ ಹೇಗೆ ಎಂದು ಗುತ್ತಿಗೆದಾರರಿಗೆ ಪ್ರಶ್ನಿಸಿದರು.

ಗೃಹಲಕ್ಷ್ಮೀ ಯೋಜನೆಗೆ ಈವರೆಗೆ 1.6 ಕೋಟಿ ಜನ ನೋಂದಣಿ

ಗೃಹಲಕ್ಷ್ಮೀ ಯೋಜನೆಗೆ ಈವರೆಗೆ 1.6 ಕೋಟಿ ಜನ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಕಾರ್ಯಕ್ಕೆ ಯಾವುದೇ ಸಮಯ ನಿಗದಿ ಇಲ್ಲ. ಈ ತಿಂಗಳಲ್ಲಿ ನೋಂದಣಿ ಮಾಡಿಸುವವರ ಸಂಖ್ಯೆ ಹೆಚ್ಚಬಹುದು. ಡಿಸೆಂಬರ್ ಅಥವಾ ಜನವರಿಯಲ್ಲಿ ಯುವನಿಧಿ ಯೋಜನೆ ಜಾರಿಯಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Key words: investigation- about- 40% commission-bill -CM Siddaramaiah-mysore