Monday, September 14, 2026

BDA Apartments

ಇಡಿ ವಿಚಾರಣೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಜರು: ಸಂಸತ್ ನಲ್ಲಿ ಕಾಂಗ...
Home Front Page ಇಡಿ ವಿಚಾರಣೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಜರು: ಸಂಸತ್ ನಲ್ಲಿ ಕಾಂಗ್ರೆಸ್ ಪ್ರತಿಭಟನೆ.

ಇಡಿ ವಿಚಾರಣೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಜರು: ಸಂಸತ್ ನಲ್ಲಿ ಕಾಂಗ್ರೆಸ್ ಪ್ರತಿಭಟನೆ.

ನವದೆಹಲಿ,ಜುಲೈ,21,2022(www.justkannada.in):  ನ್ಯಾಷನಲ್ ಹೆರಾಲ್ಡ್ ಹಗರಣ ಸಂಬಂಧ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

ನವದೆಹಲಿಯಲ್ಲಿರುವ ಇಡಿ ಕಚೇರಿಗೆ ಸೋನಿಯಾ ಗಾಂಧಿ ಹಾಜರಾಗಿದ್ದಾರೆ. ಇನ್ನು ಸೋನಿಯಾ ಗಾಂಧಿ ಅವರ ಇಡಿ ವಿಚಾರಣೆ ಖಂಡಿಸಿ ಸಂಸತ್ ಅಧಿವೇಶನದಲ್ಲಿ  ಕಾಂಗ್ರೆಸ್ ಪ್ರತಿಭಟನೆ ನಡೆಸಿತು.  ಸೊನಿಯಾಗಾಂಧಿ ಪರ ಭಿತ್ತಿಪತ್ರ ಹಿಡಿದು  ಪ್ರತಿಭಟನೆ ನಡೆಸಿ ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು. ಇತರೆ ವಿಪಕ್ಷಗಳು ಸಹ ಸಾಥ್ ನೀಡಿದವು.ಇಡಿ ವಿಚಾರಣೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಜರು hfss

ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆ ಕಲಾಪ ಮುಂದೂಡಿಕೆ  ಮಾಡಲಾಯಿತು  ಇನ್ನು ಕಾಂಗ್ರೆಸ್ ಪ್ರತಿಭಟನೆ ವಿರುದ್ಧ ಕಿಡಿಕಾರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಸೋನಿಯಾ ಗಾಂಧಿ ಅವರನ್ನ ಇಡಿ ವಿಚಾರಣೆಗೆ ಕರೆದಿದೆ. ಆದರೆ ಕಾಂಗ್ರೆಸ್ ಗೆ  ಬೀದಿಗಿಳಿದು ಪ್ರತಿಭಟನೆ ಮಾಡುವ ಅಗತ್ಯವೇನಿದೆ. ಹೀಗೆ ಪ್ರತಿಭಟನೆ ನಡೆಸಿ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Key words: AICC President -Sonia Gandhi- attends -ED -hearing