Friday, August 7, 2026

BDA Apartments

Home Front Page ಇಂದು ಸಂಜೆ ಎಐಸಿಸಿ ಕೋರ್ ಕಮಿಟಿ ಸಭೆ: ಅಧ್ಯಕ್ಷರ ಗಾದಿಗೆ ಇಬ್ಬರು ಹೆಸರು ಮುಂಚೂಣಿಯಲ್ಲಿ..?

ಇಂದು ಸಂಜೆ ಎಐಸಿಸಿ ಕೋರ್ ಕಮಿಟಿ ಸಭೆ: ಅಧ್ಯಕ್ಷರ ಗಾದಿಗೆ ಇಬ್ಬರು ಹೆಸರು ಮುಂಚೂಣಿಯಲ್ಲಿ..?

ನವದೆಹಲಿ,ಆ,1,2019 (www.justkannada.in): ಇಂದು ಸಂಜೆ 6 ಗಂಟೆಗೆ ಎಐಸಿಸಿ ಕೋರ್ ಕಮಿಟಿ ಸಭೆ ನಡೆಯಲಿದ್ದು ಈ ವೇಳೆ ಎಐಸಿಸಿ ನೂತನ ಅಧ್ಯಕ್ಷರ ನೇಮಕ ಕುರಿತು ಚರ್ಚೆ ನಡೆಸಲಿದ್ದಾರೆ.

ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಂಜೆ 6 ಕ್ಕೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ  ಸಭೆ ನಡೆಯಲಿದ್ದು, ಎಐಸಿಸಿ ನೂತನ ಅಧ್ಯಕ್ಷರ ಆಯ್ಕೆ ಕುರಿತು ಚರ್ಚೆ ಸಾಧ್ಯತೆ ಇದೆ. ಇನ್ನು ಅಧ್ಯಕ್ಷರ ಗಾದಿಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ರಾಜ್ಯಕಾಂಗ್ರೆಸ್ ಉಸ್ತುವಾರಿ  ಕೆ.ಸಿ.ವೇಣುಗೋಪಾಲ್ ಈ ಇಬ್ಬರು ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗುತ್ತಿದೆ.  ಇಂದು ನೂತನ ಅಧ್ಯಕ್ಷರ ಹೆಸರು ಬಹುತೇಖ ಅಂತಿಮವಾಗುವ ಸಾಧ್ಯತೆ ಇದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳ ಸಭೆ

ರಾಹುಲ್ ಗಾಂಧಿ ರಾಜೀನಾಮೆ  ನೀಡಿದ ಹಿನ್ನೆಲೆ ಎಐಸಿಸಿ ನೂತನ ಅಧ್ಯಕ್ಷರ ಆಯ್ಕೆಗೆ  ಕಾಂಗ್ರೆಸ್ ನಾಯಕರು ಕಸರತ್ತು ನಡೆಸುತ್ತಿದ್ದು ಈ ಕುರಿತು ಇಂದು ಮಹತ್ವದ ಸಭೆ ನಡೆಯಿತು.

ದೆಹಲಿಯ ಎಐಸಿಸಿ ಕಚೇರಿಯಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯಿತು. ಸಭೆಯಲ್ಲಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಹಮದ್ ಪಟೇಲ್, ಮುಕುಲ್ ವಾಸ್ನಿಕ್, ಕೆ.ಸಿ. ವೇಣುಗೋಪಾಲ್, ಹರೀಶ್ ರಾವತ್, ಮೋತಿಲಾಲ್ ಓರಾ ಭಾಗಿಯಾಗಿದ್ದರು.

Key words: AICC -Core Committee -Meeting – evening- New Delhi