Thursday, August 6, 2026

BDA Apartments

Home Front Page ಅನರ್ಹರು ಅಡ್ವಾನ್ಸ್ ಶಾಸಕರು: ಬಿಜೆಪಿಗೆ ಅಧಿಕಾರ ಮುಖ್ಯ, ಅಭಿವೃದ್ಧಿಯಲ್ಲ- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ…

ಅನರ್ಹರು ಅಡ್ವಾನ್ಸ್ ಶಾಸಕರು: ಬಿಜೆಪಿಗೆ ಅಧಿಕಾರ ಮುಖ್ಯ, ಅಭಿವೃದ್ಧಿಯಲ್ಲ- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ…

ದಾವಣಗೆರೆ,ನ,30,2019(www.justkannada.in):  ಬಿಜೆಪಿಗೆ ಅಧಿಕಾರ ಮುಖ್ಯ. ಅಭಿವೃದ್ದಿಯಲ್ಲ. ಯಾವ ಮಾರ್ಗದಲ್ಲಾದರೂ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ದಾವಣಗೆರೆಯಲ್ಲಿ ಇಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿಯವರು ತಾವೇನು ತಪ್ಪು ಮಾಡಿಲ್ಲವೆಂಬಂತೆ ಹೇಳಿಕೆ ನೀಡುತ್ತಿದ್ದಾರೆ. ತಮ್ಮಂತಹ ಸತ್ಯವಂತರೂ ಬೇರಾರು ಇಲ್ಲವೆಂದು ಓಡಾಡುತ್ತಿದ್ದಾರೆ.  ಅವರಿಗೆ ಅಧಿಕಾರ ಮುಖ್ಯ ವರೆತೂ ಅಭಿವೃದ್ಧಿಯಲ್ಲ. ಈ ವಿಚಾರ ಜನರಿಗೆ ಗೊತ್ತಿದೆ. ಜಾತಿ ಹೆಸರಲ್ಲಿ ಅವರು ಮತ ಕೇಳುತ್ತಿದ್ದಾರೆ.  ಆದ್ರೆ ಜನ ಸ್ವಚ್ಛ ರಾಜಕಾರಣವನ್ನ ಬಯಸಿದ್ದಾರೆ ಎಂದು ಹರಿಹಾಯ್ದರು.

ಅನರ್ಹರು ಅಡ್ವಾನ್ಸ್ ಶಾಸಕರು….

ಇದೇ ವೇಳೆ ಅನರ್ಹ ಶಾಸಕರು ಅಡ್ವಾನ್ಸ್ ಶಾಸಕರು ಅಡ್ವಾನ್ಸ್ ತೆಗೆದುಕೊಂಡು ಪಕ್ಷ ಬಿಟ್ಟರು ಎಂದು ವ್ಯಂಗ್ಯವಾಡಿದ ದಿನೇಶ್ ಗುಂಡೂರಾವ್,  ಅನರ್ಹ ಶಾಸಕರನ್ನ ಮಂತ್ರಿ ಡಿಸಿಎಂ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಈ ರೀತಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು.

ಹಾಗೆಯೇ ಪ್ರಧಾನಿ ಮೋದಿ ವಿರುದ್ದವೂ ಕಿಡಿಕಾರಿದ ದಿನೇಶ್ ಗುಂಡೂರಾವ್, ಮೋದಿ ಅವರಿಗೆ ದೇಶ ನಡೆಸಲು ಬರೋದಿಲ್ಲ. ಮೂರ್ಖ ಆರ್ಥಿಕ ನೀತಿಯಿಂದ ದೇಶದ ಜಿಡಿಪಿ ಕುಸಿದಿದೆ.  ಆದರೆ ಭಯದಿಂದ ಇದನ್ನ ಮೋದಿ ಯಾರಿಗೂ ಹೇಳುತ್ತಿಲ್ಲ ಎಂದು ಟೀಕಿಸಿದರು.

Key words: Advance- MLAs-Power – BJP – not development-KPCC President -Dinesh Gundurao