Saturday, September 5, 2026

BDA Apartments

Home Front Page ಮರದ ಕೆಳಗೆ ನರಳುತ್ತ ಮಲಗಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಮಾಜಿ ಶಾಸಕ ಸೋಮಶೇಖರ್….

ಮರದ ಕೆಳಗೆ ನರಳುತ್ತ ಮಲಗಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಮಾಜಿ ಶಾಸಕ ಸೋಮಶೇಖರ್….

ಮೈಸೂರು,ಮೇ,13,2019(www.justkannada.in):  ಮರದ ಕೆಳಗೆ ಮಲಗಿ ನರಳುತ್ತಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಮಾನವೀಯತೆ ಮೆರೆದಿದ್ದಾರೆ.

ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿನ ಮರದ ಕೆಳಗೆ ಮಲಗಿ ಕಳೆದ ಮೂರು ದಿನಗಳಿಂದ ಮಲ್ಲಿಕಾರ್ಜುನ್ ಎಂಬುವವರು ನರಳುತ್ತಿದ್ದರು. ಮಲ್ಲಿಕಾರ್ಜುನ ಮೈಸೂರಿನ ಕಾಕರವಾಡಿಯ ನಿವಾಸಿಯಾಗಿದ್ದು,  ನಿನ್ನೆ ತಡರಾತ್ರಿ ನರಳುತ್ತ ಮರದ ಕೆಳಗೆ ಮಲಗಿದ್ದ ವೇಳೆ ಅವರನ್ನ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಆ್ಯಂಬುಲೆನ್ಸ್ ಕರೆಸಿ ಕೆ.ಆರ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಬಳಿಕ ಮಲ್ಲಿಕಾರ್ಜುನ್ ಗೆ ರಾತ್ರಿ ಊಟ, ನೀರು ಕೊಟ್ಟು ಸೋಮಶೇಖರ್  ಧೈರ್ಯ ತುಂಬುವ ಮೂಲಕ ಆ ವ್ಯಕ್ತಿಗೆ ಆಸರೆಯಾದರು. ಮಲ್ಲಿಕಾರ್ಜುನ್  ಗ್ಯಾಂಗ್ರಿನ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ.

Key words: admitted – hospital –suffering- Former MLA- Somashekhar-help