Monday, October 12, 2026

Dasara Wishes

Mysore dasara DasraWishes_JK DasraWishes JK
Happy Dasara
Home Cinema ಆಸ್ಕರ್ ಸಂಘಟಕರ ಸದಸ್ಯತ್ವ ಸಮಿತಿಗೆ ನಟ ಸೂರ್ಯ ಆಹ್ವಾನ

ಆಸ್ಕರ್ ಸಂಘಟಕರ ಸದಸ್ಯತ್ವ ಸಮಿತಿಗೆ ನಟ ಸೂರ್ಯ ಆಹ್ವಾನ

ಬೆಂಗಳೂರು, ಜುಲೈ 01, 2022 (www.justkannada.in): ಆಸ್ಕರ್ ಸಂಘಟಕರ ಸದಸ್ಯತ್ವ ಸಮಿತಿಗೆ ತಮಿಳು ನಟ ಸೂರ್ಯ ಅವರನ್ನು ಆಹ್ವಾನಿಸಲಾಗಿದೆ.

ಹೌದು. ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ 397 ಕಲಾವಿದರನ್ನು ʼಕ್ಲಾಸ್‌ ಆಫ್‌ 2022ʼ ರ ಭಾಗವಾಗಲು ಆಹ್ವಾನಿಸಿದೆ. ಅದರಲ್ಲಿ ಸೂರ್ಯ ಕೂಡ ಸೇರಿರುವುದು ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದೆ.

ಭಾರತದಿಂದ ಹಿಂದಿ ನಟಿ ಕಾಜೊಲ್‌ ಹಾಗೂ ನಿರ್ದೇಶಕಿ ರೀಮಾ ಕಾಗ್ತಿ ಅವರನ್ನೂ ಆಹ್ವಾನಿಸಲಾಗಿದೆ.

ತಮಿಳು ನಟ ಸೂರ್ಯ ಅವರು ತಮ್ಮ ಅಭಿನಯದ ಮೂಲಕವೇ ಭಾರತೀಯ ಸಿನೆಮಾ ರಂಗದಲ್ಲಿ ಛಾಪು ಮೂಡಿಸಿದವರು. ಹೀಗಾಗಿ ಆಸ್ಕರ್ ಸಂಘಟಕರ ಸದಸ್ಯತ್ವ ಸಮಿತಿಗೆ ಸೂರ್ಯ ಅವರನ್ನು ಆಹ್ವಾನಿಸಲಾಗಿದೆ.

ಇತ್ತೀಚೆಗೆ ತೆರೆಕಂಡ ಕಮಲ್‌ ಅಭಿನಯದ ‘ವಿಕ್ರಮ್‌’ ಚಿತ್ರದ ಕೊನೆಯ ಕೆಲವು ನಿಮಿಷಗಳಲ್ಲಿ ಸೂರ್ಯ ಕಾಣಿಸಿಕೊಂಡಿದ್ದು, ರೋಲೆಕ್ಸ್‌ ಎಂಬ ನೆಗೆಟಿವ್‌ ಪಾತ್ರವನ್ನು ನಿರ್ವಹಿಸಿದ್ದಾರೆ.