ನಟ ಮಹೇಶ್ ಬಾಬು ಬಿಲ್ ಗೇಟ್ಸ್ ಭೇಟಿ ಮಾಡಿದ್ದೇಕೆ ?!

ಬೆಂಗಳೂರು, ಜುಲೈ 01, 2022 (www.justkannada.in): ನಟ ಪ್ರಿನ್ಸ್ ಮಹೇಶ್ ಬಾಬು ತಮ್ಮ ಪತ್ನಿ ನಮೃತ ಅವರೊಂದಿಗೆ ಉದ್ಯಮಿ ಬಿಲ್ ಗೇಟ್ಸ್ ಅವರನ್ನ ಭೇಟಿ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಬಿಲ್ ಗೇಟ್ಸ್ ಭೇಟಿ ಫೋಟೋವನ್ನ ಹಂಚಿಕೊಂಡಿರುವ ಮಹೇಶ್ ಬಾಬು ಸಂತಸ ವ್ಯಕ್ತಪಡಿಸಿದ್ದಾರೆ.

ಮಾನ್ಯ ಬಿಲ್ ಗೇಟ್ಸ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಪ್ರಪಂಚ ಕಂಡ ಶ್ರೇಷ್ಠ ವ್ಯಕ್ತಿಗಳಲ್ಲಿ ಇವರು ಒಬ್ಬರು. ನಿಜಕ್ಕೂ ಇವರೂ ಸ್ಪೂರ್ತಿ’ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಸರ್ಕಾರು ವಾರಿ ಪಾಟ ಸಿನಿಮಾ ಸಕ್ಸಸ್ ಆಗಿದ್ದು ಇದೀಗ ಮಹೇಶ್ ಬಾಬು ತಮ್ಮ ಕುಟುಂಬದ ಜೊತೆ ವಿದೇಶಕ್ಕೆ ತೆರಳಿದ್ದಾರೆ.