ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ರಿಲೀಸ್ ಮಂದೂಡಿಕೆ ಸಾಧ್ಯತೆ

ಬೆಂಗಳೂರು, ಜುಲೈ 01, 2022 (www.justkannada.in): ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ 2’  ರಿಲೀಸ್ ಬಗ್ಗೆ ಹೊಸದೊಂದು ಮಾಹಿತಿ ಹೊರ ಬಂದಿದೆ.

ಸಿನಿಮಾ ಚಿತ್ರೀಕರಣಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆಯಂತೆ. ಹಾಗಾಗಿ ಈ ವರ್ಷ ಸಿನಿಮಾ ಬರುವುದಿಲ್ಲ ಎನ್ನಲಾಗುತ್ತಿದೆ.

ಅಂದಹಾಗೆ  ‘ಪುಷ್ಪ 2’ ಚಿತ್ರದ ರಿಲೀಸ್ ದಿನಾಂಕ ಒಂದು ವರ್ಷದ ಮಟ್ಟಿಗೆ ಮುಂದೆ ಹೋಗಿದೆ ಎನ್ನಲಾಗುತ್ತಿದ್ದುಮ 2023 ಬದಲಿದೆ 2024ಕ್ಕೆ ಚಿತ್ರ ಥಿಯೇಟರ್’ಗೆ ಬರಲಿದೆ.

ಇನ್ನೂ ಕೂಡ ಸ್ಕ್ರಿಪ್ಟ್ ಕೆಲಸಗಳಲ್ಲಿ ನಿರ್ದೇಶಕ ಸುಕುಮಾರ್ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಈ ವರ್ಷ ಅಕ್ಟೋಬರ್‌ನಲ್ಲಿ ಸಿನಿಮಾದ ಶೂಟಿಂಗ್ ಶುರುವಾಗುವ ಸಾಧ್ಯತೆ ಇದೆ.

‘ಪುಷ್ಪ 2’ ತಾರ ಬಳಗದ ಬಗ್ಗೆ ಈಗ ಟಾಲಿವುಡ್‌ನಲ್ಲಿ ಮತ್ತೊಂದು ವಿಷಯ ಕೇಳಿ ಬರುತ್ತಿದೆ.  ಚಿತ್ರದಲ್ಲಿ ತಮಿಳಿನ ನಟ ವಿಜಯ್ ಸೇತುಪತಿ ನಟಿಸುತ್ತಾರೆ ಎ‍ನ್ನಲಾಗಿದೆ.