ಮೇಜರ್ ಸಂದೀಪ್ ಉನ್ನಿಕೃಷ್ಣನ್ ಬಯೋಪಿಕ್ ‘ಮೇಜರ್’ ಜು.3ರಿಂದ ನೆಟ್’ಫ್ಲಿಕ್ಸ್’ನಲ್ಲಿ ರಿಲೀಸ್

ಬೆಂಗಳೂರು, ಜುಲೈ 01, 2022 (www.justkannada.in): 26/11 ಮುಂಬೈ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನ ಕಥೆ ಆಧರಿಸಿದ ಸಿನಿಮಾ ಮೇಜರ್ ಒಟಿಟಿಯಲ್ಲಿ ರಿಲೀಸ್ ಆಗಲಿದೆ.

ಅಂದಹಾಗೆ ತೆಲುಗು ನಟ ಅಡಿವಿ ಶೇಷ್ ಅಭಿನಯದ ಸೂಪರ್ ಹಿಟ್​ ಚಿತ್ರ ‘ಮೇಜರ್​’ ಬಿಡುಗಡೆ ಆಗಿ ಈಗಾಗಲೇ ಎಲ್ಲಡೆ ಉತ್ತಮ ಪ್ರದರ್ಶನ ಕಾಣುತ್ತಿದೆ.

ಭಾರತ ಮಾತ್ರವಲ್ಲದೆ ಅಮೆರಿಕದಲ್ಲೂ ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ಚಿತ್ರವು ಓಟಿಟಿ ಅಲ್ಲಿ ಬಿಡುಗಡೆ ಆಗಲು ಸಿದ್ಧವಾಗಿದೆ.

ಚಿತ್ರವು ಜುಲೈ 3ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುತ್ತದೆ. ಚಿತ್ರವು ಪ್ರಮುಖ ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಸಾರವಾಗಲಿದೆ.