Thursday, August 13, 2026

BDA Apartments

Home Cinema ದರ್ಶನ್ ಹೃದಯದ ಮಾತು ಕೇಳಲಿ ಎಂದು ಸಲಹೆ ನೀಡಿದ ಕಿಚ್ಚ !

ದರ್ಶನ್ ಹೃದಯದ ಮಾತು ಕೇಳಲಿ ಎಂದು ಸಲಹೆ ನೀಡಿದ ಕಿಚ್ಚ !

ಬೆಂಗಳೂರು, ಜುಲೈ 16, 2019 (www.justkannada.in): ಅಭಿನಯ ಚಕ್ರವರ್ತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ದರ್ಶನ್ ತಮ್ಮ ಗುರಿ ಸಾಧನೆ ಮಾಡಲು ಎಲ್ಲಾ ಸಾಮರ್ಥ್ಯಗಳನ್ನು ಹೊಂದಿದ್ದಾರೆ. ಅವರು ಇನ್ನಷ್ಟು ಬೆಳೆಯಬೇಕಿದ್ದರೆ ಹೃದಯದ ಮಾತನ್ನು ಮಾತ್ರ ಕೇಳಬೇಕು ಎಂದು ಸುದೀಪ್ ಸಲಹೆ ನೀಡಿದ್ದಾರೆ.

ದರ್ಶನ್ ತಮ್ಮ ಹಳೆಯ ಫ್ರೆಂಡ್​ಶಿಪ್​ನ ನೆನಪಿನ ಕಾಣಿಕೆಯಾಗಿ ಮನೆಯಲ್ಲಿ ದರ್ಶನ್ ಜತೆಗಿನ ಫೋಟೋಗಳನ್ನು ಈಗಲೂ ಸುದೀಪ್ ಇಟ್ಟುಕೊಂಡಿದ್ದಾರೆ.

ನನ್ನೊಂದಿಗೆ ಸ್ನೇಹ ಹಂಚಿಕೊಂಡವರಿಗೆ ಸಾಯುವರೆಗೂ ನನ್ನ ಹೃದಯದಲ್ಲಿ ಸ್ಥಾನ ನೀಡಿದ್ದೀನಿ. ನಾನೇನು ಅವರಿಂದ ದೂರವಾಗಿಲ್ಲ ಎಂದು ಸುದೀಪ್ ಹೇಳಿಕೊಂಡಿದ್ದಾರೆ.