Monday, September 21, 2026

BDA Apartments

Home Cinema ‘ಸೂರರೈ ಪೋಟ್ರು’ ಸಿನಿಮಾ ನೋಡಿ ಫಿದಾ ಆದ ಕಿಚ್ಚ

‘ಸೂರರೈ ಪೋಟ್ರು’ ಸಿನಿಮಾ ನೋಡಿ ಫಿದಾ ಆದ ಕಿಚ್ಚ

ಬೆಂಗಳೂರು, ನವೆಂಬರ್ 21, 2020 (www.justkannada.in): ನಟ ಕಿಚ್ಚ ಸುದೀಪ್‌ ‘ಸೂರರೈ ಪೋಟ್ರು’ ಸಿನಿಮಾ ನೋಡಿ ಫಿದಾ ಆಗಿದ್ದಾರೆ.

ನಟ ಸೂರ್ಯ ಅಭಿನಯವನ್ನು ಸುದೀಪ್‌ ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಜತೆಗೆ ಸೂರ್ಯ ಅಭಿನಯಕ್ಕೆ ಟ್ವಿಟರ್‌ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ಸೂರರೈ ಪೋಟ್ರು ಸಿನಿಮಾದಲ್ಲಿ ಕಿಂಚಿತ್ತೂ ಲೋಪವಿಲ್ಲದ ನಿಮ್ಮ ಅಭಿನಯ ಕಂಡು ನಾನು ಚಕಿತನಾದೆ. ನಿಮಗೆ ಎದ್ದು ನಿಂತು ಗೌರವ ಸೂಚಿಸಬೇಕು. ಚಿಯರ್ಸ್‌ ಮತ್ತು ಅಭಿನಂದನೆಗಳು ಸ್ನೇಹಿತನೇ’ ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ಕನ್ನಡಿಗ ಕ್ಯಾಪ್ಟನ್‌ ಜಿ.ಆರ್‌. ಗೋಪಿನಾಥ್‌ ಅ ವರ ನಿಜಜೀವನದ ಘಟನೆಗಳನ್ನು ಆಧರಿಸಿ ‘ಸೂರರೈ ಪೋಟ್ರು’ ಸಿನಿಮಾ ಮೂಡಿಬಂದಿದೆ.