Thursday, August 13, 2026

BDA Apartments

Home Cinema ಮತ್ತೊಮ್ಮೆ ಲಾಯರ್ ಗೆಟಪ್’ನಲ್ಲಿ ಥಿಯೇಟರ್ ಬಂದ ಕ್ರೇಜಿಸ್ಟಾರ್

ಮತ್ತೊಮ್ಮೆ ಲಾಯರ್ ಗೆಟಪ್’ನಲ್ಲಿ ಥಿಯೇಟರ್ ಬಂದ ಕ್ರೇಜಿಸ್ಟಾರ್

ಬೆಂಗಳೂರು, ಜುಲೈ 26, 20118 (www.justkannada.in): ಕ್ರೇಜಿಸ್ಟಾರ್ ರವಿಚಂದ್ರನ್ ಬಹಳ ಗ್ಯಾಪ್ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ಈ ವಾರ ಅವರ ಅಭಿನಯದ ದಶರಥ ರಾಜ್ಯಾದ್ಯಂತ ತೆರೆಮೇಲೆ ಬರುತ್ತಿದೆ. ಎಂ.ಎಸ್. ರಮೇಶ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಮತ್ತೊಂದು ವಿಭಿನ್ನ ಚಿತ್ರವೇ ದಶರಥ.

ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಯುದ್ಧಕಾಂಡ ಚಿತ್ರದ ನಂತರ ಲಾಯರ್ ಆಗಿ ದಶರಥ ಚಿತ್ರದ ಮೂಲಕ ತೆರೆಮೇಲೆ ಬರುತ್ತಿದ್ದಾರೆ. ಯುದ್ಧಕಾಂಡದ ಬಳಿಕ ಮತ್ತೊಮ್ಮೆ ಲಾಯರ್ ಗೆಟಪ್‍ನಲ್ಲಿ ರವಿಚಂದ್ರನ್ ಅಭಿಮಾನಿಗಳನ್ನು ರಂಜಿಸಲಿದ್ದಾರೆ.