ಬಿಗ್ ಬಾಸ್ ಮನೆಗೆ ನೆನಪಿರಲಿ ಪ್ರೇಮ್ !?

ಬೆಂಗಳೂರು, ಫೆಬ್ರವರಿ 23, 2021 (www.justkannada.in): ಕನ್ನಡ ಬಿಗ್ ಬಾಸ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ‘ನೆನಪಿರಲಿ’ ಪ್ರೇಮ್ ಹೆಸರು ಕೇಳಿಬರುತ್ತಿದೆ.

ಎಂದಿನಂತೆ ಕಿರುತೆರೆ, ಸಿನಿಮಾ, ರಿಯಾಲಿಟಿ ಶೋಗಳ ಸ್ಪರ್ಧಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ಕೆಲವು ವ್ಯಕ್ತಿಗಳು ಬಿಗ್ ಬಾಸ್ ಮನೆ ಸೇರಲಿದ್ದಾರೆ.

‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು ಹೆಸರು ಸಹ ಬಿಗ್ ಬಾಸ್ ಪಟ್ಟಿಯಲ್ಲಿ ಚರ್ಚೆಯಾಗುತ್ತಿದೆ. ಮೂಲಗಳ ಪ್ರಕಾರ ಪ್ರೇಮ್ ಅವರು ಈ ಸಲ ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಂದಹಾಗೆ ಸದ್ಯ ಪ್ರೇಮ್ ಪ್ರೇಮಂ ಪೂಜ್ಯಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಅವರ 25ನೇ ಚಿತ್ರ.