‘ಮಂಕಿ ಟೈಗರ್’ ಧನಂಜಯ, ದಿಯಾ ಖುಷಿಗೆ ಪ್ರಶಸ್ತಿಯ ಖುಷಿ !

ಬೆಂಗಳೂರು, ಫೆಬ್ರವರಿ 23, 2021 (www.justkannada.in): ‘ಚಂದನವನ ಫಿಲ್ಮ್ಸ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2021′ ಪ್ರಕಟಿಸಲಾಗಿದೆ.

ಪಾಪ್‌ ಕಾರ್ನ್ ಮಂಕಿ ಟೈಗರ್’ ಸಿನಿಮಾದ ನಟನೆಗೆ ಧನಂಜಯ್ ಅತ್ಯುತ್ತಮ ನಟ, ‘ದಿಯಾ’ ಸಿನಿಮಾದ ಅತ್ಯುತ್ತಮ ನಟನೆಗೆ ಖುಷಿ ಅತ್ಯುತ್ತಮ ನಟಿ ಪ್ರಶಸ್ತಿ  ಪಡೆದಿದ್ದಾರೆ.

ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಆಕ್ಟ್-1978’ ಸಿನಿಮಾದ ನಿರ್ದೇಶಕ ಮಂಸೋರೆಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಲಾಗಿದೆ.

2020 ರಲ್ಲಿ ಬಿಡುಗಡೆ ಆದ ಅತ್ಯುತ್ತಮ ಸಿನಿಮಾಗಳನ್ನು ಸಿನಿಮಾ ಪತ್ರಕರ್ತರು ನೋಡಿ 21 ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ನಟ, ನಟಿ, ತಂತ್ರಜ್ಞರನ್ನು ಆಯ್ಕೆ ಮಾಡಿದ್ದರು.

ಅಚ್ಯುತ್‌ ಕುಮಾರ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ತಾರಾ ಅನುರಾಧಾಗೆ ಶಿವಾರ್ಜುನ ಸಿನಿಮಾಕ್ಕಾಗಿ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ.

ಅತ್ಯುತ್ತಮ ಸಂಗೀತ ದಿಯಾ ಗಾಗಿ ಅಜನೀಶ್ ಲೋಕನಾಥ್, ‘ಮರಳಿ ಮನಸ್ಸಾಗಿದೆ’ ಹಾಡಿಗೆ ಅತ್ಯುತ್ತಮ ಗಾಯಕ ಸಂಜಿತ್ ಹೆಗಡೆಗೆ ಪ್ರಶಸ್ತಿ, ದಿಯಾ ಸಿನಿಮಾದ ಹಾಡಿಗಾಗಿ ಚಿನ್ಮಯಿಗೆ ಪ್ರಶಸ್ತಿ ದೊರೆತಿದೆ. ಸಂಗೀತ ನಿರ್ದೇಶನ ವಿಭಾಗದಲ್ಲಿ ರಘು ದೀಕ್ಷಿತ್ ಗೆ ಪ್ರಶಸ್ತಿ ದೊರೆತಿದೆ.