ಅಪ್ಪು ಸಿನಿಮಾಗೆ ದಿನಕರ್ ತೂಗುದೀಪ ಆ್ಯಕ್ಸನ್ ಕಟ್ ?!

ಬೆಂಗಳೂರು, ಫೆಬ್ರವರಿ 23, 2021 (www.justkannada.in): ದಿನಕರ್‌ ತೂಗದೀಪ ಮುಂದಿನ ಸಿನಿಮಾದಲ್ಲಿ ಪವರ್‌ ಸ್ಟಾರ್ ಪುನೀತ್‌ ರಾಜ್‌ಕುಮಾರ್‌’ಗೆ ‘ಆಕ್ಷನ್-ಕಟ್’ ಹೇಳಲಿದ್ದಾರೆ ಎನ್ನಲಾಗಿದೆ.

ಸಿನಿಮಾಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪುನೀತ್‌ ರಾಜ್‌ಕುಮಾರ್‌ ಜೊತೆಗೆ ಒಂದು ಸುತ್ತಿನ ಮಾತುಕತೆಯನ್ನು ದಿನಕರ್‌ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮೂಲಕ ಅಪ್ಪು ಹಾಗೂ ದಿನಕರ್‌ ತೂಗದೀಪ ಅಭಿಮಾನಿಗಳಿಗೆ ಸಿಹಿಯೊಂದು ಬಂದಿದೆ.

ಸದ್ಯ ಜೇಮ್ಸ್‌ ಸಿನಿಮಾದ ಚಿತ್ರೀಕರಣದಲ್ಲಿ ಪುನೀತ್‌ ಬ್ಯೂಜಿಯಾಗಿದ್ದಾರೆ. ಇದಾದ ಬಳಿಕ ಮತ್ತೊಮ್ಮೆ ದಿನಕರ್‌ ಕಥೆಯ ಅಂತಿಮ ಸುತ್ತಿನ ಮಾತುಕತೆ ನಡೆಯಲಿದೆ ಎನ್ನಲಾಗಿದೆ.