Tuesday, October 13, 2026

Dasara Wishes

Happy Dasara
Home Cinema ಕೈದಿಯಾಗಿ ನಟಿಸಿದ್ದ ಅದೇ  ಜೈಲಿಗೆ ನಟ ದರ್ಶನ್ ಈಗ ರಿಯಲ್ ಕೈದಿಯಾಗಿ ಎಂಟ್ರಿ: ವಿಐಪಿ ಸೆಲ್...

ಕೈದಿಯಾಗಿ ನಟಿಸಿದ್ದ ಅದೇ  ಜೈಲಿಗೆ ನಟ ದರ್ಶನ್ ಈಗ ರಿಯಲ್ ಕೈದಿಯಾಗಿ ಎಂಟ್ರಿ: ವಿಐಪಿ ಸೆಲ್ ನಲ್ಲಿ ಸಿದ್ದತೆ

ಬೆಂಗಳೂರು,ಆಗಸ್ಟ್,28,2024 (www.justkannada.in): ಜೈಲನ್ನೇ ರೆಸಾರ್ಟ್ ಮಾಡಿಕೊಂಡು ಮೋಜು ಮಸ್ತಿ ಮಾಡಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ಇದೀಗ ನಟ ದರ್ಶನ್ ಅವರನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದ್ದು ಉಳಿದ ಆರೋಪಿಗಳನ್ನ ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ.

ಚೌಕಾ ಸಿನಿಮಾದಲ್ಲಿ ಬಳ್ಳಾರಿ ಜೈಲಿನಲ್ಲಿ ಕೈದಿಯಾಗಿ ನಟಿಸಿದ್ದ ದರ್ಶನ್ ಈಗ ನಿಜ ಕೈದಿಯಾಗಿ ಎಂಟ್ರಿ ಕೊಡಲಿದ್ದಾರೆ. ನಟ ದರ್ಶನ್ ಇಂದು ಬಳ್ಳಾರಿ ಜೈಲಿಗೆ ಶಿಫ್ಟ್  ಆಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಬಳ್ಳಾರಿ ಜೈಲಿನಲ್ಲಿರುವ ವಿಐಪಿ ಸೆಲ್ ಸಿದ್ದತೆ ಮಾಡಲಾಗಿದ್ದು, ವಿಡಿಯೋ ಕಾನ್ಫರೆನ್ಸ್ ಜೊತೆಗೆ ಸಿಸಿ ಕ್ಯಾಮರಾ ಕಣ್ಗಾವಲಿರುವ ಸೆಲ್ ಗೆ ನಟ ದರ್ಶನ್ ಸ್ಥಳಾಂತರವಾಗಲಿದ್ದಾರೆ. 1884 ರ ಬ್ರಿಟೀಷ್ ಕಾಲದಲ್ಲಿ ನಿರ್ಮಾಣವಾದ ಬಳ್ಳಾರಿ ಜೈಲಿನಲ್ಲಿ 9 ಬ್ಯಾರಕ್ ಗಳಿದ್ದು, 385 ಕೈದಿಗಳಿದ್ದಾರೆ.

ನಟ ದರ್ಶನ್ ಗೆ  ಜೈಲಿನಲ್ಲೇ ರಾಜಾತಿಥ್ಯ ಕೊಟ್ಟ ಫೋಟೊ ವೈರಲ್ ಆದ ಬೆನ್ನಲ್ಲೆ ಜೈಲಲ್ಲಿ ದುಡ್ಡಿದ್ದವರಿಗೊಂದು ನ್ಯಾಯ ಇಲ್ಲದವರಿಗೊಂದು ನ್ಯಾಯ ಎಂಬ ಟೀಕೆ ವ್ಯಕ್ತವಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ 9 ಜನ ಜೈಲಾಧಿಕಾರಿಗಳನ್ನ ಸಸ್ಪಂಡ್ ಮಾಡಿತ್ತು.

ಬೇರೆ ಬೇರೆ ಜೈಲಿಗೆ ದರ್ಶನ್ ಗ್ಯಾಂಗ್  ಶಿಫ್ಟ್

ನಂತರ ಡಿ.ಗ್ಯಾಂಗ್ ಸ್ಥಳಾಂತರಕ್ಕೆ ಮುಂದಾಗಿದ್ದು  ಬಳ್ಳಾರಿ ಸೆಂಟ್ರಲ್ ಜೈಲಿಗೆ ನಟ ದರ್ಶನ್ ಶಿಫ್ಟ್ ಆಗುತ್ತಿದ್ದಾರೆ.  ಬೇರೆ ಬೇರೆ ಜೈಲಿಗೆ ದರ್ಶನ್ ಗ್ಯಾಂಗ್  ಸ್ಥಳಾಂತರವಾಗುತ್ತಿದ್ದಾರೆ  ಎ1 ಆರೋಪಿ ಪವಿತ್ರಗೌಡ ಪರಪ್ಪನ ಅಗ್ರಹಾರದಲ್ಲಿ ಉಳಿಯಲಿದ್ದಾರೆ.  ಮೈಸೂರು ಜೈಲಿಗೆ ಆರೋಪಿ ಪವನ್, ರಾಘವೇಂದ್ರ ಮತ್ತು ನಂದೀಶ್ ಶಿಫ್ಟ್ ಆದರೆ ಶಿವಮೊಗ್ಗ ಜೈಲಿಗೆ ಜಗದೀಶ್,ಲಕ್ಷ್ಮಣ್ ಸ್ಥಳಾಂತರವಾಗಲಿದ್ದಾರೆ, ಧನರಾಜ್ ಧಾರವಾಡ, ವಿನಯ್ ವಿಜಯಪುರ, ನಾಗರಾಜು ಕಲ್ಬುರ್ಗಿ ,ಪ್ರದೂಷ್ ಬೆಳಗಾವಿ ಜೈಲಿಗೆ ಶಿಫ್ಟ್ ಆಗಲಿದ್ದಾರೆ.

Key words: Actor Darshan, shift, ballari, jail, prison