Sunday, September 20, 2026

BDA Apartments

ರಸ್ತೆ ಅಪಘಾತ: ಸ್ಥಳದಲ್ಲೇ ಐವರು ಸಾವು BDA JK_Adv BDA Adv
Home Crime ರಸ್ತೆ ಅಪಘಾತ: ಸ್ಥಳದಲ್ಲೇ ಐವರು ಸಾವು.

ರಸ್ತೆ ಅಪಘಾತ: ಸ್ಥಳದಲ್ಲೇ ಐವರು ಸಾವು.

ಬಳ್ಳಾರಿ,ಮಾರ್ಚ್,5,2024(www.justkannada.in):  ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಐವರು ಸಾವನ್ನಪ್ಪಿರುವ ಧಾರುಣ ಘಟನೆ ಮೆಹಬೂಬ್ ನಗರ್ ಜಿಲ್ಲೆಯ   ಕೊತಕೋಟ ಬೈಪಾಸ್‌ ನ ತೆಕ್ಕಲಯ್ಯ ದರ್ಗಾ ಬಳಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಸಂಭವಿಸಿದೆ.

ಮೃತರ ವಿವರಗಳು ವಾಸಿ(01),  ಬುಸ್ರಾ (02), ಮಾರಿಯಾ, ಫಾತಿಮಾ (50), ಅಬ್ದುಲ್ ರಹಮಾನ್ (30) ಮೃತಪಟ್ಟವರು. ಮೂಲತಃ ಬಳ್ಳಾರಿಯ ದೇವಿನಗರದ ಬಸವನ ಕುಂಟೆ ನಿವಾಸಿಗಳಾದ ಅಬ್ದುಲ್ ರೆಹಮಾನ್ ಅವರ  ಕುಟುಂಬ ಸದಸ್ಯರು ಬಳ್ಳಾರಿಯಿಂದ ಹೈದರಾಬಾದ್  ಕಡೆಗೆ ಹೋಗುತ್ತಿದ್ದಾಗ ಮೆಹಬೂಬ್ ನಗರ್ ಜಿಲ್ಲೆಯ   ಕೊತಕೋಟ ಬೈಪಾಸ್‌ ನ ತೆಕ್ಕಲಯ್ಯ ದರ್ಗಾ ಬಳಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಭೀಕರ ರಸ್ತೆ ಅಪಘಾತವಾಗಿದೆ.ರಸ್ತೆ ಅಪಘಾತ accident

ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರೆಹಮಾನ್ ಅವರ  ಹರಿಟಿಗಾ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತೊಂದು ಮಗು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದೆ. ಇಬ್ಬರಿಗೂ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಮೆಹಬೂಬ್ ನಗರ್ ಜಿಲ್ಲೆಗೆ ಸ್ಥಳಾಂತರಿಸಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದೆ. ಅಪಘಾತಕ್ಕೆ ಅತಿಯಾದ ವೇಗ ಕಾರಣ ಜವರಾಯ ತನ್ನ ಅಟ್ಟಹಾಸವನ್ನು ತೋರಿಸಿದ್ದಾನೆ . ಗಾಯಗೊಂಡ ಶಫಿ, ಅಸ್ಸಾನ್, ಖದೀರ್, ಅಲಿ, ಅಬೀಬ್  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Key words: accident-five-daead-ballari