Thursday, September 17, 2026

BDA Apartments

Home Cinema ಮೈಸೂರಿನಲ್ಲಿ ಅಭಿಷೇಕ್ ಅಂಬರೀಶ್ ‘ಬ್ಯಾಡ್ ಮಾನರ್ಸ್’ ! ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್

ಮೈಸೂರಿನಲ್ಲಿ ಅಭಿಷೇಕ್ ಅಂಬರೀಶ್ ‘ಬ್ಯಾಡ್ ಮಾನರ್ಸ್’ ! ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್

ಮೈಸೂರು, ಜನವರಿ 15, 2020 (www.justkannada.in): ಇಂದಿನಿಂದ ಸೂರಿ ನಿರ್ದೇಶನದ ನಟ ಅಭಿಷೇಕ್ ಅಂಬರೀಶ್ ಅಭಿನಯದ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಇಂದು ಬೆಳಿಗ್ಗೆ ತಾಯಿ ಚಾಮುಂಡೇಶ್ವರಿ ದೇವಿ ದರ್ಶನ ಮುಗಿಸಿ ಚಿತ್ರೀಕರಣ ಆರಂಭ ಮಾಡುತ್ತಿದ್ದೇನೆ. ಮಂಡ್ಯದಿಂದ ಚಿತ್ರೀಕರಣ ಆರಂಭ ಆಗುತ್ತದೆ ಎಂದು ಮಾಹಿತಿ ನೀಡಿದರು ಚಿತ್ರದ ನಾಯಕ ಅಭಿಷೇಕ್.

ಇನ್ನು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸೆಲ್ಫಿಗಾಗಿ ಅಭಿಷೇಕ್ ಸುತ್ತುವರಿದ ಅಭಿಮಾನಿಗಳು ನೆಚ್ಚಿನ ನಟನನ್ನು ಹತ್ತಿರದಿಂದ ಕಂಡು ಖುಷಿ ಪಟ್ಟರು. ಅಭಿಷೇಕ್ ಜತೆ ಸೆಲ್ಫಿ ತೆಗೆಸಿಕೊಂಡು ಸಂತಸಪಟ್ಟರು.

ಇದೇ ವೇಳೆ ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನಕ್ಕೆ ಅಭಿಷೇಕ್ ಚಾಲನೆ ನೀಡಿದರು. ಸ್ವತಃ ತಾವೇ ಅಭಿಮಾನಿಯ ಫೋನ್ ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಟ್ಟ ಅಭಿಷೇಕ್ ಫ್ಯಾನ್ಸ್ ಗಳನ್ನು ಖುಷಿಪಡಿಸಿದರು.