ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಬಾರದಾ? : ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನೆ

ಹುಬ್ಬಳ್ಳಿ,ಜನವರಿ15,2021(www.justkannada.in) : ಯಾರು ಮಾತನಾಡುತ್ತಾರೆ ಅವರನ್ನು ವಿಲನ್ ಮಾಡುತ್ತಾರೆ. ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಬಾರದಾ? ಎಂದು ಸಿ.ಪಿ.ಯೋಗೇಶ್ವರ ವಿರುದ್ಧ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.jk-logo-justkannada-mysoreಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡಸಿ ಮಾತನಾಡಿದ ಅವರು,  9700 ವೈಯಕ್ತಿಕ ದೂರುಗಳಿವೆ,‌ ಮೆಗಾ ಸಿಟಿ ಹಗರಣ ನಡೆದಿದೆ. ಜನರಿಂದ‌ ಹಣ ಪಡೆದು ವಂಚಿಸಿದ್ದಾರೆ, ಅಂತವರು ಮಂತ್ರಿಯಾದ್ರೆ ಹೇಗೆ? ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತೆರವಾದ್ರೆ ಜೈಲಿಗೆ ಹೋಗ್ತಾರೆ. ಅಂತವರು ಮಂತ್ರಿ ಮಾಡಬೇಕಾ ? ಎಂದು ಪ್ರಶ್ನಿಸಿದರು.

ನಾನು ಯಡಿಯೂರಪ್ಪ ನಾಯಕತ್ವದ ಬಗ್ಗೆ ಮಾತನಾಡುತ್ತಿಲ್ಲ. ಅವರ ನಡವಳಿಕೆ ಬಗ್ಗೆ ಮಾತನಾಡುತ್ತೇನೆ. ಅಮಿತ್ ಶಾ ಭೇಟಿಗೆ ಅವಕಾಶ ಕೇಳಿದ್ದೇನೆ. ಜನವರಿ 17ರಂದು ಅಮಿತ್ ಶಾ ಬೆಳಗಾವಿ ಭೇಟಿ ವೇಳೆ ಅವಕಾಶ ಕೇಳಿದ್ದೇನೆ ಎಂದಿದ್ದಾರೆ.

“ಮೀಸಲಾತಿ ಪಡೆಯಲು ಹೋರಾಟ ನಡೆಸಲೆಬೇಕು”

ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಬೇಡಿಕೆ ಇದೆ. ಇದಕ್ಕಾಗಿ ಕಾಗಿನೆಲೆಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆ ಹಿನ್ನೆಲೆ ಜನರನ್ನು ಭೇಟಿಯಾಗಲು ಬಂದಿದ್ದೇನೆ. ಸಿದ್ದರಾಮಯ್ಯ ಮೀಸಲಾತಿ ಹೋರಾಟ ಬೇಡ ಅಂತೀದಾರೆ. ವೀರಶೈವ ಲಿಂಗಾಯತ ಮುಖ್ಯಮಂತ್ರಿಗಳು ಇದ್ಯಾಗೂ ೨ಎ ಸೇರಿಸುವಂತೆ ಹೋರಾಟ ನಡೆಸಿದ್ದಾರೆ ಎಂದರು.

ಸಿದ್ದರಾಮಯ್ಯ ಏಕಚಕ್ರಾದಿಪತಿ ಎಂಬಂತೆ ವರ್ತಿಸುತ್ತಿದ್ದಾರೆcorruption,government,Question,about,Shouldn't,Questioned,Member,Parliament,H.Vishwanath

ಮೀಸಲಾತಿ ಪಡೆಯಲು ಹೋರಾಟ ನಡೆಸಲೆಬೇಕು. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಯಾಕೆ ಮೀಸಲಾತಿ ಬಗ್ಗೆ ಯೋಚಿಸಲಿಲ್ಲ. ಈಶ್ವರಪ್ಪ ಬೆಳೆದುಬಿಡ್ತಾರೆ ಎಂಬ ಆತಂಕದಿಂದ ವಿರೋಧಿಸುತ್ತಿದ್ದಾರೆ. ಸಿದ್ದರಾಮಯ್ಯ ಏಕಚಕ್ರಾದಿಪತಿ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

key words : corruption-government-Question-about-Shouldn’t-Questioned-Member-Parliament-H.Vishwanath