Sunday, August 2, 2026

BDA Apartments

Home Cinema ನೆರೆ ಸಂತ್ರಸ್ಥರ ರಕ್ಷಣೆಗೆ  ರಾಯರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ- ನಟ ಜಗ್ಗೇಶ್ ಹೇಳಿಕೆ…

ನೆರೆ ಸಂತ್ರಸ್ಥರ ರಕ್ಷಣೆಗೆ  ರಾಯರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ- ನಟ ಜಗ್ಗೇಶ್ ಹೇಳಿಕೆ…

ಮಂತ್ರಾಲಯ,ಆ,17,2019(www.justkannada.in): ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ  ನಲುಗಿರುವ ಸಂತ್ರಸ್ತರನ್ನ ರಕ್ಷಿಸಲಿ ಎಂದು ರಾಯರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ನಟ ಜಗ್ಗೇಶ್ ತಿಳಿಸಿದರು.

ಶ್ರೀ ರಾಘವೇಂದ್ರ ಸ್ವಾಮಿಗಳ 384ನೇ ಆರಾಧನಾ ಮಹೋತ್ಸವ ಹಿನ್ನೆಲೆ ಇಂದು  ಮಧ್ಯಾರಾಧನೆ ನೆರವೇರಿತು. ಇಂದು ನಟ ಜಗ್ಗೇಶ್ ಮಂತ್ರಾಲಯಕ್ಕೆ ಭೇಟಿ ನೀಡಿ ಗುರು ರಾಯರ ದರ್ಶನ ಪಡೆದರು.

ಬಳಿಕ ಮಮಾತನಾಡಿದ ನಟ ಜಗ್ಗೇಶ್, ರಾಜ್ಯದಲ್ಲಿ ನೆರೆ ಬಂದಿದೆ. ಈ‌ ನೆರೆಯಿಂದ ಸಂತ್ರಸ್ತರನ್ನು ರಕ್ಷಿಸಲಿ ಎಂದು ರಾಯರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ನೆರೆ ಸಂದರ್ಭದಲ್ಲಿ ಚಿತ್ರರಂಗ ದಕ್ಷಿಣ, ಉತ್ತರ ಕರ್ನಾಟಕ ಎಂಬ ಪ್ರತ್ಯೇಕವಾಗಿ ನೋಡುವುದಿಲ್ಲ. ನೆರೆ ಸಂತ್ರಸ್ಥರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದಿಸಲಿವೆ ಎಂದರು.

ನಾನು ಚಿಕ್ಕವನಿದ್ದಾಗಿನಿಂದಲೂ‌ ರಾಯರ ಭಕ್ತ. ನನ್ನನ್ನು ರಾಯರ ಸನ್ನಿದಾನದಲ್ಲಿ ಕುಳ್ಳರಿಸಿ ಪ್ರಾರ್ಥಿಸಲು ಸ್ವಾಮೀಜಿಗಳು ಅವಕಾಶ ನೀಡಿದ್ದಾರೆ. ಇದು ನನ್ನ ಸೌಭಾಗ್ಯ ಎಂದು ಜಗ್ಗೇಶ್ ತಿಳಿಸಿದರು.

Key words: prayed protection – neighboring victims-  Actor Jaggesh -mantralaya