ಮೈಸೂರಿನಲ್ಲೊಂದು ಅಪರೂಪದ ಘಟನೆ : ವಾಷಿಂಗ್ ಮಿಷನ್ ನಲ್ಲಿ ಕಾಣಿಸಿಕೊಂಡ ‘ಬುಸ್ ಬುಸ್ ನಾಗಪ್ಪ’

ಮೈಸೂರು,ಆ,17,2019(www.justkannada.in): ವಾಷಿಂಗ್ ಮಿಷನ್ ಬಳಸುವ ಗೃಹಿಣಿಯರು  ಎಚ್ಚರವಾಗಿರಬೇಕು ಹೌದು, ವಾಷಿಂಗ್ ಮಷಿನ್ ನಲ್ಲಿ  ಹಾವು ಸೇರಿಕೊಂಡಿದ್ದ ಅಪರೂಪದ ಘಟನೆ ಮೈಸೂರು ನಡೆದಿದೆ.

ಮೈಸೂರಿನ ಶ್ರೀ ಶಿವರಾತ್ರೀಶ್ವರ ನಗರದಲ್ಲಿ ಈ ಘಟನೆ ನಡೆದಿದೆ.  ಇಲ್ಲಿನ ನಿವಾಸಿ ಸ್ಟಾಲಿನ್ ಕೆ.ಪೌಲ್ ಅವರ ಮನೆಯ ವಾಷಿಂಗ್ ಮಷಿನ್ ಒಳಗೆ ನಾಗರ ಹಾವು ಸೇರಿಕೊಂಡಿತ್ತು. ಈ ನಡುವೆ ಸ್ಟಾಲಿನ್ ಕೆ.ಪೌಲ್ ಅವರ ಹೆಂಡತಿ,  ಪತಿಯ ಬಟ್ಟೆ ಒಗೆಯಲು ಹಾಕಿ ಮಗುವಿನ ಬಟ್ಟೆ ಹಾಕಲು ಹೋದಾಗ  ನಾಗರಹಾವು ಕಾಣಿಸಿಕೊಂಡಿದೆ.

ತಕ್ಷಣ  ಹೆಂಡತಿ ತನ್ನ ಗಂಡನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಈ ವಿಷಯವನ್ನ ಉರಗ ತಜ್ಞ ಸ್ನೇಕ್ ಶ್ಯಾಂ ಅವರಿಗೆ ಮುಟ್ಟಿಸಲಾಗಿತ್ತು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಸ್ನೇಕ್ ಶ್ಯಾಂ ಅವರು  ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

Key words: Mysore-snake-washing machine-protect