Thursday, October 15, 2026

Dasara Wishes

Strengthening DasraWishes_JK DasraWishes JK
Happy Dasara
Home Cinema ಹೆಡ್’ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನ ಆರೋಪ: ಸ್ಪಷ್ಟನೆ ನೀಡಿದ ಡಾಲಿ ಧನಂಜಯ

ಹೆಡ್’ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನ ಆರೋಪ: ಸ್ಪಷ್ಟನೆ ನೀಡಿದ ಡಾಲಿ ಧನಂಜಯ

ಬೆಂಗಳೂರು, ಅಕ್ಟೋಬರ್ 27, 2022 (www.justkannada.in): ಹೆಡ್ ಬುಷ್ ಚಿತ್ರದ ನಟ ಹಾಗೂ ಸಿನಿಮಾದ ನಿರ್ಮಾಪಕರೂ ಆಗಿರುವ ಡಾಲಿ ಧನಂಜಯ್ ವಿರುದ್ಧ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಹೆಡ್ ಬುಷ್’ ಸಿನಿಮಾದಲ್ಲಿ ವೀರಗಾಸೆಗೆ ಅಪಮಾನ ಎಸಗುವ ದೃಶ್ಯಗಳಿವೆ ಎಂದು ಕೆಲವರು ಆರೋಪ ಮಾಡಿದ್ದಾರೆ.

ಸಿನಿಮಾದ ಫೈಟ್ ದೃಶ್ಯವೊಂದರಲ್ಲಿ, ವೀರಗಾಸೆ ನೃತ್ಯ ಮಾಡುವ ಕಲಾವಿದರೊಟ್ಟಿಗೆ ನಾಯಕ ಡಾಲಿ ಧನಂಜಯ್ ಫೈಟ್ ಮಾಡಿದ್ದಾರೆ. ಈ ದೃಶ್ಯಗಳ ಬಗ್ಗೆ ಟೀಕೆ ವ್ಯಕ್ತವಾಗಿದೆ.

ವೀರಗಾಸೆ ವೇಷದಲ್ಲಿರುವವರನ್ನು ಕುಟ್ಟಿ ಕೆಡವುತ್ತಾರೆ, ಈ ದೃಶ್ಯದ ಬಗ್ಗೆ ಅಲ್ಲಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ವತಃ ಧನಂಜಯ್ ಸ್ಪಷ್ಟನೆ ನೀಡಿದ್ದಾರೆ, ‘ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸಗೆ ಅವಮಾನಿಸುವ ಯಾವ ಅಂಶವು ಇಲ್ಲದಂತೆ ನೋಡಿಕೆೊಂಡಿದ್ದೇನೆ ಎಂದು ತಿಳಿಸಿದ್ದಾರೆ.